ಕರ್ನಾಟಕ

karnataka

ETV Bharat / briefs

ಚುನಾವಣಾ ಪ್ರಚಾರದಲ್ಲಿ ಮಕ್ಕಳ ಬಳಕೆ: ಪ್ರಿಯಾಂಕಾಗೆ ನೋಟಿಸ್​ ಜಾರಿ - ಪ್ರಿಯಾಂಕಾ

ಕಳೆದ ಕೆಲ ದಿನಗಳ ಹಿಂದೆ ಉತ್ತರಪ್ರದೇಶದ ಅಮೇಠಿಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ, ಪ್ರಿಯಾಂಕಾಗೆ ಸಾಥ್​ ನೀಡಿದ್ದ ಮಕ್ಕಳು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೆಟ್ಟ ಪದ ಬಳಕೆ ಮಾಡಿದ್ದರು. ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ನೋಟಿಸ್​ ಜಾರಿಯಾಗಿದೆ.

ಪ್ರಿಯಾಂಕಾ ಗಾಂಧಿ

By

Published : May 2, 2019, 9:08 PM IST

ಅಮೇಠಿ: ಕಾಂಗ್ರೆಸ್​​ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಗೆ ಕೇಂದ್ರ ಚುನಾವಣಾ ಆಯೋಗ ನೋಟಿಸ್​​ ಜಾರಿ ಮಾಡಿದೆ. ಮತಬೇಟೆಯ ವೇಳೆ ಮಕ್ಕಳನ್ನು ಬಳಕೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಆಯೋಗ ಈ ಕ್ರಮ ತೆಗೆದುಕೊಂಡಿದೆ.

ಅಮೇಠಿಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಪ್ರಿಯಾಂಕಾ ಗಾಂಧಿ, ಅಲ್ಲಿನ ಪುಟ್ಟ ಹಳ್ಳಿಯೊಂದಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಲ್ಲಿನ ಮಕ್ಕಳು 'ಚೌಕಿದಾರ್​ ಚೋರ್​ ಹೈ' ಎಂದು ಘೋಷಣೆ ಕೂಗಿದ್ದರು. ಇದನ್ನ ಕಂಡ ಪ್ರಿಯಾಂಕಾ ಸಂತೋಷಪಟ್ಟಿದ್ದರು. ಇದೇ ವೇಳೆ ಮತ್ತಷ್ಟು ಉತ್ಸಾಹಗೊಂಡಿದ್ದ ಮಕ್ಕಳು, ಮೋದಿ ವಿರುದ್ಧ ಇನ್ನೂ ಹೆಚ್ಚಿನ ಕೆಟ್ಟ ಬೈಗುಳಗಳನ್ನೂ ಬಳಸಿದ್ದರು. ಮಕ್ಕಳು ಈ ರೀತಿ ಪದಬಳಕೆ ಮಾಡಿ ಕಿರುಚಾಡುತ್ತಿದ್ದರೂ ಪ್ರಿಯಾಂಕಾ ತುಟಿ ಬಿಚ್ಚಿರಲಿಲ್ಲ. ಈ ವಿಡಿಯೋ ಎಲ್ಲೆಡೆ ವೈರಲ್​ ಆಗಿತ್ತು.

ABOUT THE AUTHOR

...view details