ಕರ್ನಾಟಕ

karnataka

ETV Bharat / briefs

ಮೇ 30ರಂದು ಮೋದಿ ಪ್ರಮಾಣ ವಚನ ಸ್ವೀಕಾರ... ಮೊದಲ ಆಹ್ವಾನ ಹೋಗಿದ್ದು ಇವರಿಗೆ..! - ಕಮಲ್​ ಹಾಸನ್

ಮಕ್ಕಳ್ ನೀದಿ ಮೈಯ್ಯಮ್ ಪಕ್ಷವನ್ನು ಸ್ಥಾಪಿಸಿರುವ ಕಮಲ್ ಹಾಸನ್​​, ತಮಿಳುನಾಡಿನಲ್ಲಿ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ಪಕ್ಷ ಸ್ಪರ್ಧೆ ನಡೆಸಿತ್ತು. ರಜಿನಿಕಾಂತ್​ ಸಹ ಆಗಾಗ್ಗೆ ರಾಜಕೀಯ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾ ಬಂದಿದ್ದಾರೆ.

Narendra Modi

By

Published : May 27, 2019, 6:05 PM IST

ನವದೆಹಲಿ:ಇದೇ ಗುರುವಾರದಂದು ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ ಎರಡನೇ ಅವಧಿಗೆ ಅಧಿಕಾರ ಸ್ವೀಕರಿಸಲಿದ್ದು, ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಗಣ್ಯರಿಗೆ ಆಹ್ವಾನ ನೀಡಲಾಗಿದೆ.

ತಮಿಳು ಚಿತ್ರರಂಗದ ಸೂಪರ್​​ಸ್ಟಾರ್​ ರಜಿನಿಕಾಂತ್ ಹಾಗೂ ನಟ ಕಮಲ್​ ಹಾಸನ್​​ಗೆ ಮೋದಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೊದಲ ಹಂತದಲ್ಲಿ ಆಹ್ವಾನ ಹೋಗಿದೆ. ಆದರೆ ಈ ಇಬ್ಬರೂ ನಟರು ಈ ಕುರಿತಂತೆ ಯಾವುದೇ ಹೇಳಿಕೆಯನ್ನು ನೀಡಿಲ್ಲ.

ಸೂಪರ್​​ಸ್ಟಾರ್​ ರಜಿನಿಕಾಂತ್

ಮೋದಿ ಮತ್ತೊಮ್ಮೆ: ಹೂಡಿಕೆದಾರರಿಗೆ ಹರ್ಷ ತಂದ ಮಹಾ ಫಲಿತಾಂಶ..!

ಮಕ್ಕಳ್ ನೀದಿ ಮೈಯ್ಯಮ್ ಪಕ್ಷವನ್ನು ಸ್ಥಾಪಿಸಿರುವ ಕಮಲ್ ಹಾಸನ್​​, ತಮಿಳುನಾಡಿನಲ್ಲಿ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿ ಪಕ್ಷ ಸ್ಪರ್ಧೆ ನಡೆಸಿತ್ತು. ರಜಿನಿಕಾಂತ್​ ಸಹ ಆಗಾಗ್ಗೆ ರಾಜಕೀಯ ವಿಚಾರದ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾ ಬಂದಿದ್ದಾರೆ.

ನಟ, ಮಕ್ಕಳ್ ನೀದಿ ಮೈಯ್ಯಮ್ ಪಕ್ಷದ ಸ್ಥಾಪಕ ಕಮಲ್ ಹಾಸನ್

ಸ್ವಿಸ್​ ಬ್ಯಾಂಕ್​​ನಲ್ಲಿ ಹಣವಿಟ್ಟ 25 ಭಾರತೀಯರಿಗೆ ಸ್ವಿಜರ್ಲೆಂಡ್​ ನೋಟಿಸ್​​!

ಮೇ 30ರಂದು ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೋದಿ ಜೊತೆಯಲ್ಲಿ ಸಂಪುಟ ಸದಸ್ಯರೂ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮ ಗುರುವಾರ ಸಂಜೆ 7 ಗಂಟೆಗೆ ನಡೆಯಲಿದೆ.

ABOUT THE AUTHOR

...view details