ಮೈಸೂರು:ಇಂದು ನಗರದ ಚಾಮರಾಜೇಂದ್ರ ಮೃಗಾಲಯ ಪುನಾರಂಭಗೊಳ್ಳುತ್ತಿದ್ದು, ಈ ಕಾರ್ಯಕ್ರಮಕ್ಕೆ ಸಂಸದೆ ಸುಮಲತಾ ಅವರ ಆಗಮನಕ್ಕಾಗಿ ಜಿಲ್ಲಾಡಳಿತ ಕಾದು ಕುಳಿತಿದೆ.
ಸಂಸದೆ ಸುಮಲತಾಗಾಗಿ ಕಾದು ಕುಳಿತ ಜಿಲ್ಲಾಡಳಿತ! - Mysore latest news
ಕೊರೊನಾ ಲಾಕ್ಡೌನ್ ನಿಂದಾಗಿ ಕಳೆದೆರಡು ತಿಂಗಳಿಂದ ಬಂದ್ ಆಗಿದ್ದ ನಗರದ ಚಾಮರಾಜೇಂದ್ರ ಮೃಗಾಲಯ ಪುನರಾರಂಭಗೊಳ್ಳುತ್ತಿದೆ. ಈ ಕಾರ್ಯಕ್ರಮಕ್ಕೆ ಸಂಸದೆ ಸುಮಲತಾರವರ ಆಗಮನಕ್ಕಾಗಿ ಜಿಲ್ಲಾಡಳಿತವೇ ಕಾದು ಕುಳಿತಿದೆ.
Mysore
ಕೊರೊನಾ ಲಾಕ್ಡೌನ್ ನಿಂದಾಗಿ ಕಳೆದೆರಡು ತಿಂಗಳಿಂದ ಬಂದ್ ಆಗಿದ್ದ ನಗರದ ಚಾಮರಾಜೇಂದ್ರ ಮೃಗಾಲಯ ಪುನರಾರಂಭಗೊಳ್ಳುತ್ತಿದೆ. ಈ ಕಾರ್ಯಕ್ರಮಕ್ಕೆ ಮಂಡ್ಯ ಸಂಸದೆ ಸುಮಲತಾ ಅವರನ್ನು ಆಹ್ವಾನಿಸಲಾಗಿತ್ತು. ಆದರೆ, ಇನ್ನು ಕೂಡ ಆಮಿಸದ ಕಾರಣ ಅವರಿಗಾಗಿ ಜಿಲ್ಲಾಡಳಿತ ಕಾದು ಕುಳಿತಿದೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಹರ್ಷವರ್ಧನ್, ಮೇಯರ್ ತಸ್ನಿಂ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಜಿಪಂ ಸಿಇಒ ಪಿ.ಕೆ.ಮಿಶ್ರಾ, ಮೃಗಾಲಯದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಜಿತ್ ಕುಲಕರ್ಣಿ ಅರ್ಧ ತಾಸಿನಿಂದ ಕಾದು ಕುಳಿತಿದ್ದಾರೆ.