ಮೈಸೂರು: ಮೈಸೂರು-ಬೆಂಗಳೂರು ನಡುವೆ ವಿಮಾನ ಹಾರಾಟ ಸೇವೆ ಶುರುಮಾಡುವ ಮೂಲಕ ಕೇಂದ್ರ 'ಉಡಾನ್ ಯೋಜನೆ'ಗೆ ರಾಜ್ಯದಲ್ಲಿ ಚಾಲನೆ ನೀಡಲಾಗಿದೆ. ಸಂಸದ ಪ್ರತಾಪ ಸಿಂಹ, ಸಚಿವ ಜಿ.ಟಿ.ದೇವೇಗೌಡ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ ಈ ವೇಳೆ ಉಪಸ್ಥಿತರಿದ್ದರು.
ಮೈಸೂರು-ಬೆಂಗಳೂರು ನಡುವೆ 'ಉಡಾನ್' ವಿಮಾನ ಸೇವೆ ಪ್ರಾರಂಭ - ಉಡಾನ್-3 ಯೊಜನೆ
ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ರಾಜ್ಯದ ಮೂರು ನಗರಗಳಿಗೆ ಕಡಿಮೆ ದರದಲ್ಲಿ ವಿಮಾನ ಪ್ರಯಾಣ ಸೇವೆಯನ್ನು ಪ್ರಾರಂಭಿಸಲಾಗಿದೆ. ಶುಕ್ರವಾರ ಸಂಸದ ಪ್ರತಾಪ್ ಸಿಂಹ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ, ಸಚಿವ ಜಿ.ಟಿ.ದೇವೇಗೌಡ ಮೈಸೂರಿನಿಂದ ಬೆಂಗಳೂರು ಮಾರ್ಗದ ನಡುವಿನ ವಿಮಾನ ಹಾರಾಟಕ್ಕೆ ಚಾಲನೆ ನೀಡಿದರು.

ಮೈಸೂರು-ಬೆಂಗಳೂರು ವಿಮಾನ ಹಾರಾಟ ಇಂದಿನಿಂದ ಆರಂಭ
ಮೈಸೂರು-ಬೆಂಗಳೂರು ವಿಮಾನ ಹಾರಾಟ ಇಂದಿನಿಂದ ಆರಂಭ
ಏರ್ ಇಂಡಿಯಾ ವಿಮಾನವು ಬೆಂಗಳೂರಿನಿಂದ ಮೈಸೂರಿಗೆ 55 ನಿಮಿಷದಲ್ಲಿ ತಲುಪುತ್ತದೆ. ಈ ವಿಮಾನ ಸೇವೆಯು ವಾರದ 6 ದಿನ ಲಭ್ಯವಿದ್ದು, ₹1,500 ದರ ನಿಗದಿಪಡಿಸಲಾಗಿದೆ. ಇದರಿಂದ ದೇಶದ ಇತರ ಭಾಗಗಳಿಗೂ ಸುಲಭವಾಗಿ ಸಂಪರ್ಕ ಕಲ್ಪಿಸಲು ಸಹಕಾರಿಯಾಗಲಿದೆ. ಜತೆಗೆ ಪ್ರವಾಸೋಧ್ಯಮ ಅಭಿವೃದ್ಧಿಗೂ ಪೂರಕವಾಗಲಿದೆ ಎನ್ನಲಾಗಿದೆ.