ಭುವನೇಶ್ವರ್:ತಾವು ಸಲಿಂಗ ಸಂಬಂಧ ಹೊಂದಿರುವ ವಿಷಯವನ್ನ ಈಗಾಗಲೇ ಅಧಿಕೃತವಾಗಿ ಘೋಷಣೆ ಮಾಡಿಕೊಂಡಿರುವ ಭಾರತದ ಖ್ಯಾತ ಅಥ್ಲೀಟ್ ದ್ಯುತಿ ಚಾಂದ್ ಇದೀಗ ತಮ್ಮ ಸಹೋದರಿ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ನನ್ನ ಸಹೋದರಿಯಿಂದಲೇ ಬ್ಲಾಕ್ಮೇಲ್... ₹25 ಲಕ್ಷಕ್ಕೆ ಬೇಡಿಕೆ: ಅಕ್ಕನ ಮೇಲೆ ದ್ಯುತಿ ಚಾಂದ್ ಆರೋಪ! - ದ್ಯುತಿ ಚಾಂದ್ ಆರೋಪ
ಈಗಾಗಲೇ ತಾವು ಸಲಿಂಗ ಸಂಬಂಧ ಹೊಂದಿರುವ ವಿಷಯದ ಕುರಿತು ಬಹಿರಂಗಪಡಿಸಿರುವ ಖ್ಯಾತ ಅಥ್ಲೀಟ್ ದ್ಯುತಿ ಚಾಂದ್ ಇದೀಗ ಸುದ್ದಿಗೋಷ್ಠಿ ನಡೆಸಿದರು.
![ನನ್ನ ಸಹೋದರಿಯಿಂದಲೇ ಬ್ಲಾಕ್ಮೇಲ್... ₹25 ಲಕ್ಷಕ್ಕೆ ಬೇಡಿಕೆ: ಅಕ್ಕನ ಮೇಲೆ ದ್ಯುತಿ ಚಾಂದ್ ಆರೋಪ!](https://etvbharatimages.akamaized.net/etvbharat/prod-images/768-512-3343621-thumbnail-3x2-wdfes.jpg)
ಭುವನೇಶ್ವರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ದ್ಯುತಿ, ನನ್ನ ಸ್ವಹ ಸಹೋದರಿ ಬ್ಲಾಕ್ ಮೇಲ್ ಮಾಡ್ತಿದ್ದು, 25 ಲಕ್ಷ ರೂಪಾಯಿಗಾಗಿ ಬೇಡಿಕೆಯಿಟ್ಟಿರುವ ಆಕೆ ನನ್ನ ಮೇಲೆ ಹಲ್ಲೆ ಕೂಡ ನಡೆಸಿದ್ದಾಳೆ. ಈಗಾಗಲೇ ಈ ವಿಷಯಕ್ಕೆ ಸಂಬಂಧಿಸಿದಂತೆ ನಾನು ಪೊಲೀಸರಿಗೆ ದೂರು ನೀಡಿದ್ದು, ಸತತವಾಗಿ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿದ್ದಾಳೆ. ಇದೇ ಕಾರಣಕ್ಕಾಗಿ ನಾನು ನನ್ನ ಸಲಿಂಗ ಸಂಬಂಧದ ಕುರಿತು ಹೇಳಿಕೊಂಡಿರುವೆ ಎಂದು ತಿಳಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ತಾವು ಸಲಿಂಗಕಾಮಿ ಎಂಬ ಮಾಹಿತಿ ಬಹಿರಂವಾಗುತ್ತಿದ್ದಂತೆ ಆಕೆಯ ಹಿರಿಯ ಸಹೋದರಿ ಈ ವಿಷಯ ಅಲ್ಲಗಳೆದಿದ್ದು, ಆಸ್ತಿ ಮತ್ತು ಬೆಳವಣಿಗೆ ಸಹಿಸದವರು ತೀವ್ರ ಒತ್ತಡ ಹಾಗೂ ಬ್ಲ್ಯಾಕ್‌ಮೇಲ್‌ಗೆ ಮಣಿದು ನನ್ನ ಸಹೋದರಿ ಈ ರೀತಿ ಹೇಳಿಕೆ ನೀಡಿದ್ದಾಳೆ ಎಂದು ತಿಳಿಸಿದ್ದರು. ಇದರ ಜತೆಗೆ ದ್ಯುತಿ ಚಾಂದ್ ಅವರ ಜೀವನ ಹಾಗೂ ಅವರ ಆಸ್ತಿ ಅಪಾಯದಲ್ಲಿದೆ. ಹಾಗಾಗಿ, ರಕ್ಷಣೆ ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಅವರು ತಿಳಿಸಿದ್ದರು. ಚಾಂದ್ ಅವರ ಹಿರಿಯ ಸಹೋದರಿ ಸರಸ್ವತಿ ಕೂಡ ಅಥ್ಲೀಟ್ ಆಗಿದ್ದಾರೆ.