ಕರ್ನಾಟಕ

karnataka

ETV Bharat / briefs

ಮಸೀದಿ ಪ್ರವೇಶಕ್ಕೆ ಮುಸ್ಲಿಂ ಮಹಿಳೆಯರಿಗೆ ಅವಕಾಶ ನೀಡಿ... ಸುಪ್ರೀಂ ಮೆಟ್ಟಿಲೇರಿದ ದಂಪತಿ

800 ವರ್ಷ ಹಳೆಯ ಸಂಪ್ರದಾಯಕ್ಕೆ ಕೊನೆಹಾಡಿ ಶಬರಿಮಲೆಯಲ್ಲಿ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಸರ್ವೋಚ್ಛ ನ್ಯಾಯಾಲಯ ಅನುವು ಮಾಡಿಕೊಟ್ಟು ಮಹತ್ವದ ಆದೇಶ ನೀಡಿತ್ತು. ಇದೇ ಸದ್ಯ ಮುಸ್ಲಿಂ ಮಹಿಳೆಯರಿಗೆ ಸ್ಫೂರ್ತಿಯಾಗಿದೆ. ಜೊತೆಗೆ ಲಿಂಗ ಅಸಮಾತನೆಯನ್ನೂ ಅವರು ಪ್ರಶ್ನಿಸಿದ್ದಾರೆ.

ಮಸೀದಿ

By

Published : Apr 15, 2019, 9:20 PM IST

ನವದೆಹಲಿ: ಮಸೀದಿಗಳಿಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕೆಂಬ ಕೂಗು ಕೇಳಿಬಂದಿದೆ. ಇದೀಗ ಮುಸ್ಲಿಂ ದಂಪತಿ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಇಂದು ಈ ಅರ್ಜಿ ಸಲ್ಲಿಕೆಯಾಗಿದ್ದು ನಾಳೆ ಕೋರ್ಟ್​ ಅರ್ಜಿ ವಿಚಾರಣೆ ನಡೆಸಲಿದೆ. ಮಹಾರಾಷ್ಟ್ರದ ಯಸ್ಮೀಜ್​​​​​​ ಜುಬೇರ್​​ ಅಹ್ಮದ್​​​ ಪೀರ್​​ಜಾದೆ ಹಾಗೂ ಜುಬೇರ್​​ ಅಹ್ಮದ್​​​ ಪೀರ್​​ಜಾದೆ ಅರ್ಜಿ ಸಲ್ಲಿಸಿರುವ ದಂಪತಿ.

800 ವರ್ಷ ಹಳೆಯ ಸಂಪ್ರದಾಯಕ್ಕೆ ಕೊನೆಹಾಡಿ ಶಬರಿಮಲೆಯಲ್ಲಿ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಸರ್ವೋಚ್ಛ ನ್ಯಾಯಾಲಯ ಅನುವು ಮಾಡಿಕೊಟ್ಟಿತ್ತು. ಇದೇ ಸದ್ಯ ಅರ್ಜಿದಾರರಿಗೆ ಸ್ಫೂರ್ತಿಯಾಗಿದೆ. ಜೊತೆಗೆ ಲಿಂಗ ಅಸಮಾನತೆಯನ್ನೂ ಪ್ರಶ್ನಿಸಿದ್ದಾರೆ.

ಮಸೀದಿಗಳಲ್ಲಿ ಮಹಿಳೆಯರಿಗೆ ಪ್ರವೇಶ ನಿರ್ಬಂಧಿಸಿರುವುದು ಅಕ್ರಮ ಹಾಗೂ ಅಂಸವಿಧಾನಿಕ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಸ್ತುತ ಮಹಿಳೆಯರು ಜಮಾತ್​​-ಇ-ಇಸ್ಲಾಮಿ ಹಾಗೂ ಮುಜಾಹಿದ್​​​​ನ ಅಡಿಯಲ್ಲಿರುವ ಮಸೀದಿಗಳಲ್ಲಿ ಮಾತ್ರ ಮಹಿಳೆಯರಿಗೆ ನಮಾಜ್​ ಸಲ್ಲಿಸಲು ಅವಕಾಶವಿದೆ.

ABOUT THE AUTHOR

...view details