ಮಂಡ್ಯ:ಕೊರೋನಾ ರೂಲ್ಸ್ ಬ್ರೇಕ್ ಮಾಡಿದ ಹಿನ್ನೆಲೆಯಲ್ಲಿ ಸಮುದಾಯ ಭವನಕ್ಕೆ ನಗರಸಭೆ ಅಧಿಕಾರಿಗಳು ದಾಳಿ ನಡೆಸಿ ದಂಡ ವಿಧಿಸಿದ್ದಾರೆ.
ಕೊರೊನಾ ನಿಯಮ ಪಾಲಿಸದೆ ನಿಶ್ಚತಾರ್ಥ: ದಾಳಿ ನಡೆಸಿ 15 ಸಾವಿರ ದಂಡ ವಿಧಿಸಿದ ಅಧಿಕಾರಿಗಳು - ನಗರಸಭೆ ಆಯುಕ್ತ ಲೋಕೇಶ್ ನೇತೃತ್ವದಲ್ಲಿ ದಾಳಿ
ಕೊರೊನಾ ನಿಯಮಗಳನ್ನು ಪಾಲಿಸದೇ ಹೆಚ್ಚಿನ ಜನ ಸೇರಿಸಿ ನಿಶ್ಚಿತಾರ್ಥ ನಡೆಸುತ್ತಿದ್ದ ಸಮುದಾಯ ಭವನಕ್ಕೆ ದಾಳಿ ನಡೆಸಿದ ನಗರಸಭೆ ಅಧಿಕಾರಿಗಳು 15 ಸಾವಿರ ದಂಡ ವಿಧಿಸಿದ್ದಾರೆ.
Mandya
ನಗರದ ಬನ್ನೂರು ರಸ್ತೆಯಲ್ಲಿರುವ ಯೋಗಿ ನಾರಾಯಣ ಸಮುದಾಯ ಭವನದಲ್ಲಿ ನಿಶ್ಚಿತಾರ್ಥದಲ್ಲಿ ಜನ ಜಂಗುಳಿ ಸೇರಿದ್ದ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ದಾಳಿ ನಡೆಸಿ 15 ಸಾವಿರ ರೂ. ದಂಡ ಹಾಕಿದ್ದಾರೆ.
ಹೆಚ್ಚಿನ ಜನ ಸೇರಿಸಿ ನಿಶ್ಚಿತಾರ್ಥ ಮಾಡುತ್ತಿದ್ದ ಸಮುದಾಯ ಭವನಕ್ಕೆ ನಗರಸಭೆ ಆಯುಕ್ತ ಲೋಕೇಶ್ ನೇತೃತ್ವದಲ್ಲಿ ದಾಳಿ ಮಾಡಿ ದಂಡ ವಿಧಿಸಿ, ಮುಂದೆ ಇಂತಹ ಘಟನೆಗಳು ನಡೆಯದಂತೆ ಸೂಚನೆ ನೀಡಿದ್ದಾರೆ.