ಮುಂಬೈ: ಮುಂಬೈ - ಕೋಲ್ಕತಾ ವಿಸ್ಟಾರಾ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಮೂವರು ಗಂಭೀರ ಗಾಯಗೊಂಡಿದ್ದಾರೆ. ವಿಸ್ಟಾರಾ ವಿಮಾನ ಲ್ಯಾಂಡ್ ಆಗುವ ಮುನ್ನ ಗಾಳಿಯ ಪ್ರಕ್ಷುಬ್ಧತೆಗೆ ಒಳಗಾಗಿದ್ದರಿಂದ ಮೂವರು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ
ಪ್ರಕ್ಷುಬ್ಧತೆಯಿಂದ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾಯ - Vistara flight
ಮುಂಬೈಯಿಂದ ಇಂಗ್ಲೆಂಡ್ನ 775 ವಿಮಾನವು ಪ್ರಯಾಣಿಕನನ್ನು ಹೊತ್ತು ಕೋಲ್ಕತ್ತಾಗೆ ಸಂಚರಿಸುತ್ತಿತ್ತು. ಈ ವೇಳೆ ಗಾಳಿಯ ಪ್ರಕ್ಷುಬ್ಧತೆಗೆ ಒಳಗಾಗಿದೆ.
![ಪ್ರಕ್ಷುಬ್ಧತೆಯಿಂದ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಗಂಭೀರ ಗಾಯ Mumbai-Kolkata Vistara flight critically injured due to turbulence](https://etvbharatimages.akamaized.net/etvbharat/prod-images/768-512-08:16:03:1623077163-83310339-0706newsroom-1623075294-415.webp)
Mumbai-Kolkata Vistara flight critically injured due to turbulence
ಮುಂಬೈಯಿಂದ ಯುಕೆ 775 ವಿಮಾನವು ಪ್ರಯಾಣಿಕನನ್ನು ಹೊತ್ತು ಕೋಲ್ಕತ್ತಾಗೆ ಸಂಚರಿಸುತ್ತಿತ್ತು. ಈ ವೇಳೆ ಗಾಳಿಯ ಪ್ರಕ್ಷುಬ್ಧತೆಗೆ ಒಳಗಾಗಿದೆ. ಆದರೂ ಕೂಡ ಇಂದು ಸಂಜೆ ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ.
ವಿಮಾನದಲ್ಲಿ 113 ಪ್ರಯಾಣಿಕರಿದ್ದರು. ಗಾಯಗೊಂಡ ಮೂವರು ಪ್ರಯಾಣಿಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಓರ್ವ ಪ್ರಯಾಣಿಕರನ್ನು ಬಿಡುಗಡೆ ಮಾಡಲಾಗಿದ್ದು, ಇತರ ಇಬ್ಬರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಮೂಲಗಳು ತಿಳಿಸಿವೆ.