ಮುಂಬೈ: ಎರಡೂ ತಂಡಗಳ ಪ್ಲೇ ಆಫ್ ನಿರ್ದರಿಸಲಿರುವ ಮಹತ್ವದ ಪಂದ್ಯದಲ್ಲಿ ಟಾಸ್ಗೆದ್ದ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಆಯ್ದುಕೊಂಡಿದೆ.
12 ಪಂದ್ಯಗಳಲ್ಲಿ 7 ಗೆಲುವು ಕಂಡಿರುವ ಮುಂಬೈ ಪ್ಲೇ ಆಫ್ ಗೆ ನೇರವಾಗಿ ಪ್ರವೇಶಿಸಲು ಈ ಪಂದ್ಯ ಗೆಲ್ಲಲೆಬೇಕಿದೆ. ಗೆದ್ದರೆ ಡೆಲ್ಲಿ-ಚೆನ್ನೈ ನಂತರ ಮೂರನೇ ತಂಡವಾಗಿ ಪ್ಲೇ ಆಫ್ ತಲುಪಲಿದೆ.ಒಂದು ವೇಳೆ ಈ ಪಂದ್ಯ ಸೋತರೆ ಮುಂದಿನ ಪಂದ್ಯವನ್ನು ರನ್ರೇಟ್ ಲೆಕ್ಕಾಚಾರದಲ್ಲಿ ಗೆಲ್ಲಬೇಕಾದಂತ ಒತ್ತಡಕ್ಕೆ ಸಿಲುಕಲಿದೆ.
ಒಂದು ವೇಳೆ ಈ ಪಂದ್ಯವನ್ನು ಹೈದರಾಬಾದ್ ಗೆದ್ದರೆ ಪ್ಲೇ ಆಫ್ ಖಚಿತವಾಗಲಿದೆ. ಏಕೆಂದರೆ ಈಗಾಗಲೆ 12 ಪಂದ್ಯಗಳಲ್ಲಿ ತಲಾ 6 ಗೆಲವು-ಸೋಲುಕಂಡಿರುವ ಹೈದರಾಬಾದ್ ತಂಡ 14 ಅಂಕದ ಜೊತೆಗೆ ಉತ್ತಮ ರನ್ರೇಟ್ ಹೊಂದಿರುವ ಕಾರಣ ಪ್ಲೆ ಅಫ್ಗೆ ಎಂಟ್ರಿಕೊಡಲಿದೆ.