ಕರ್ನಾಟಕ

karnataka

ETV Bharat / briefs

ಹಾರ್ನ್​ ಕಿರಿಕಿರಿಗೆ ಇಲ್ಲಿದೆ ಸಖತ್ ಐಡಿಯಾ... 11ರ ಬಾಲಕಿಯ ಪತ್ರಕ್ಕೆ ಆನಂದ್ ಮಹೀಂದ್ರ  ಫುಲ್​ಖುಷ್..!

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಉದ್ಯಮಿ ಆನಂದ್ ಮಹೀಂದ್ರ ತಮ್ಮ ಖಾತೆಯಲ್ಲಿ ಹನ್ನೊಂದು ವರ್ಷದ ಬಾಲಕಿಯ ಐಡಿಯಾವನ್ನು ಶೇರ್ ಮಾಡಿದ್ದಾರೆ.

ಆನಂದ್ ಮಹೀಂದ್ರ

By

Published : Apr 5, 2019, 12:40 PM IST

ಮುಂಬೈ:ರಸ್ತೆಗಿಳಿದರೆ ಸಾಕು ಹಾರ್ನ್​ ಅಬ್ಬರ... ಟ್ರಾಫಿಕ್​ನಲ್ಲಿ ಒಂದು ನಿಮಿಷ ಸಿಲುಕಿದ್ದರೆ ಮತ್ತದೇ ಹಾರ್ನ್​ ಕಿರಿಕಿರಿ.. ಇದಕ್ಕೆ ಏನೂ ಪರಿಹಾರ ಇಲ್ವಾ ಎನ್ನುವ ಮಂದಿಗೆ ಹನ್ನೊಂದು ವರ್ಷದ ಬಾಲಕಿ ಒಂದೊಳ್ಳೆ ಐಡಿಯಾ ನೀಡಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಉದ್ಯಮಿ ಆನಂದ್ ಮಹೀಂದ್ರ ತಮ್ಮ ಖಾತೆಯಲ್ಲಿ ಹನ್ನೊಂದು ವರ್ಷದ ಬಾಲಕಿಯ ಐಡಿಯಾವನ್ನು ಶೇರ್ ಮಾಡಿದ್ದಾರೆ.

ನೇರವಾಗಿ ಆನಂದ್ ಮಹೀಂದ್ರಾರಿಗೆ ಪತ್ರ ಬರೆದಿದ್ದ ಮಹಿಕಾ ಮಿಶ್ರಾ ಎನ್ನುವ 11 ವರ್ಷದ ಬಾಲಕಿ ಹಾರ್ನ್​ ಕಿರಿಕಿರಿಗೆ ವಿವರವಾದ ಪರಿಹಾರ ನೀಡಿದ್ದಾಳೆ. ಮಹೀಂದ್ರಾ ಕಂಪೆನಿಯಲ್ಲಿ ಮುಂದಿನ ದಿನಗಳಲ್ಲಿ ತಯಾರಾಗುವ ಕಾರುಗಳಲ್ಲಿನ ಹಾರ್ನ್​ ಹತ್ತು ನಿಮಿಷದಲ್ಲಿ ಕೇವಲ ಐದು ನಿಮಿಷ ಮಾತ್ರ ಹಾರ್ನ್​ ಆಗುವಂತಿರಬೇಕು ಮತ್ತು ಆ ಹಾರ್ನ್​ ಕೇವಲ ಮೂರು ಸೆಕೆಂಡ್ ಮಾತ್ರ ಕೇಳಿಸುವಂತಿರಬೇಕು ಎಂದು ತನ್ ಐಡಿಯಾವನ್ನು ಹಂಚಿಕೊಂಡಿದ್ದಾಳೆ.

ಆನಂದ್ ಮಹೀಂದ್ರ ಟ್ವಿಟರ್​ನಲ್ಲಿ ಶೇರ್ ಬಾಲಕಿಯ ಪತ್ರ ಶೇರ್ ಮಾಡ್ತಿದ್ದಂತೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವತಃ ಆನಂದ್ ಮಹೀಂದ್ರ ಅಡಿಬರಹದಲ್ಲಿ ಮೆಚ್ಚುಗೆಯ ನುಡಿಗಳನ್ನು ಬರೆದಿದ್ದಾರೆ.

ABOUT THE AUTHOR

...view details