ಹೈದರಾಬಾದ್:ಈ ಆವೃತ್ತಿಯ ಐಪಿಎಲ್ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ಹಾಗೂ ಚಾಣಾಕ್ಷ ನಾಯಕತ್ವದಿಂದ ಗಮನ ಸೆಳೆದ ಎಂ.ಎಸ್.ಧೋನಿಯ ಫೈನಲ್ ಪಂದ್ಯದಲ್ಲಿ ಔಟಾಗಿರುವ ರೀತಿ ಇದೀಗ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.
ಇಶಾನ್ ಕಿಶನ್ರ ಥ್ರೋ ನೇರವಾಗಿ ವಿಕೆಟ್ ಬಂದು ಬಡಿಯುತ್ತದೆ. ರಿಪ್ಲೇಯ ಒಂದು ಆ್ಯಂಗಲ್ನಲ್ಲಿ ಧೋನಿ ಔಟ್ ಎಂದು ಕಂಡುಬಂದರೆ ಇನ್ನೊಂದು ಆ್ಯಂಗಲ್ನಲ್ಲಿ ನಾಟೌಟ್ ಎನ್ನುವ ಅಭಿಪ್ರಾಯ ಮೂಡಿಸಿದೆ. ಮೂರನೆ ಅಂಪೈರ್ ನಿಜೆಲ್ ಲಾಂಗ್ ಔಟ್ ಎಂದು ತೀರ್ಪಿತ್ತು ಪಂದ್ಯಕ್ಕೆ ತಿರುವು ನೀಡಿದರು.
ಧೋನಿಯ ಈ ರನೌಟ್ ಕ್ರಿಕೆಟ್ ಮಂದಿಯನ್ನು ಮಾತ್ರವಲ್ಲದೇ ಸಿನಿಮಾ ಮಂದಿಗೂ ಬೇಸರ ತರಿಸಿದೆ. ಟ್ವಿಟರ್ ತುಂಬೆಲ್ಲಾ ಮುಂಬೈ ಗೆಲುವಿಗಿಂತ ಧೋನಿ ಔಟಾದ ರೀತಿಯೇ ಹೆಚ್ಚಾಗಿ ಚರ್ಚೆಯಾಗಿದೆ.
ಕಾಮೆಂಟರಿ ನೀಡುತ್ತಿದ್ದ ಸಂಜಯ್ ಮಾಂಜ್ರೇಕರ್ ಧೋನಿ ಔಟ್ ಎಂದು ಅಭಿಪ್ರಾಯಕ್ಕೆ ಬಂದಿದ್ದರು. ಆದರೆ ಇತರ ವೀಕ್ಷಕ ವರದಿಗಾರರಿಗೆ ಇದರ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಆದರೆ ಅನುಮಾನದ ಲಾಭ ಬ್ಯಾಟ್ಸ್ಮನ್ ಪರವಾಗಿರಬೇಕು ಎನ್ನುವುದು ಕ್ರಿಕೆಟ್ನ ಅಲಿಖಿತ ನಿಯಮ. ಆದರೆ ಇದೂ ಸಹ ಇಲ್ಲಿ ಧೋನಿಗೆ ಒಲಿಯಲಿಲ್ಲ.
ಧೋನಿ ವಿಕೆಟ್ ನಿರ್ಣಾಯಕವಾಗಿದ್ದಂತೂ ಸುಳ್ಳಲ್ಲ. ಒಂದು ವೇಳೆ ಕೊನೆ ತನಕ ಧೋನಿ ಕ್ರೀಸ್ನಲ್ಲೇ ಇದ್ದಿದ್ದೇ ಆದರೆ ಫಲಿತಾಂಶವೇ ಬೇರೆಯದ್ದಾಗಿರುತ್ತಿತ್ತು.