ಕರ್ನಾಟಕ

karnataka

ETV Bharat / briefs

ಪದೇ ಪದೆ ಬೆನ್ನು ನೋವಿನ ಸಮಸ್ಯೆ: ವಿಶ್ವಕಪ್​ ದೃಷ್ಟಿಯಿಂದ ಫಿಟ್ನೆಸ್​​​ ಬಗ್ಗೆ ಹೆಚ್ಚು ಗಮನ ಎಂದ ಧೋನಿ! - ಫಿಟ್ನೇಸ್​

ಈ ಹಿಂದಿನಿಂದಲೂ ಬೆನ್ನು ನೋವಿನ ಸಮಸ್ಯೆಗೆ ಒಳಗಾಗುತ್ತಿರುವ ಧೋನಿ, ಅದನ್ನ ಲೆಕ್ಕಕ್ಕೆ ತೆಗೆದುಕೊಳ್ಳದೇ ಮೈದಾನಕ್ಕಿಳಿಯುತ್ತಿದ್ದಾರೆ. ಆದರೆ ಇದೀಗ ಅದರ ನೋವಿನ ಪರಿಣಾಮ ಹೆಚ್ಚಾಗಿದೆ ಎಂಬ ಮಾತನ್ನ ಮಾಹಿ ಹೇಳಿದ್ದಾರೆ.

ಎಂಎಸ್​ ಧೋನಿ

By

Published : Apr 24, 2019, 5:14 PM IST

Updated : Apr 24, 2019, 5:41 PM IST

ಚೆನ್ನೈ: ಟೀಂ ಇಂಡಿಯಾದ ಅನುಭವಿ ಆಟಗಾರ ಮಹೇಂದ್ರ ಸಿಂಗ್​ ಧೋನಿ ಸದ್ಯ ಇಂಡಿಯನ್ ಪ್ರೀಮಿಯರ್​​ ಲೀಗ್​ನಲ್ಲಿ ಮಿಂಚುತ್ತಿದ್ದು, ಮೇಲಿಂದ ಮೇಲೆ ಬೆನ್ನು ನೋವಿನ ಸಮಸ್ಯಗೆ ಕೂಡ ಒಳಗಾಗುತ್ತಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಹೈದರಾಬಾದ್​ ವಿರುದ್ಧದ ಪಂದ್ಯದಿಂದ ಧೋನಿ ಬೆನ್ನು ನೋವಿನ ಕಾರಣ ಹೊರಗುಳಿದಿದ್ದರು. ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಾಹಿ, ಮುಂಬರುವ ವಿಶ್ವಕಪ್​ ಟೂರ್ನಿ ಗಮನದಲ್ಲಿಟ್ಟುಕೊಂಡು ನಾನು ​ಫಿಟ್ನೆಸ್​ ಬಗ್ಗೆ ಇನ್ನಷ್ಟು ಗಮನ ಹರಿಸುವೆ ಎಂದು ತಿಳಿಸಿದ್ದಾರೆ.

ಮೈದಾನದಲ್ಲಿ ಕೆಲವೊಮ್ಮೆ ಬೆನ್ನು ಹಿಡಿದಿಟ್ಟುಕೊಳ್ಳುತ್ತಿದ್ದು, ಅದರಿಂದ ಆಡಲು ತೊಂದರೆ ಆಗುತ್ತಿದೆ. ಮುಂಬರುವ ವಿಶ್ವಕಪ್​ ವೇಳೆಗೆ ಶೇ.100ರಷ್ಟು ಫಿಟ್​ ಆಗಿ ಕಣಕ್ಕಿಳಿಯಲು ಕ್ರಮ ಕೈಗೊಳ್ಳುವುದಾಗಿ ಮಾಹಿ ಹೇಳಿಕೊಂಡಿದ್ದಾರೆ.

ನಿನ್ನೆ ಸನ್​ರೈಸರ್ಸ್​ ವಿರುದ್ಧ ಗೆಲುವು ದಾಖಲು ಮಾಡಿರುವ ಸಿಎಸ್​ಕೆ ತಂಡ ಪ್ಲೇ-ಆಫ್​ಗೆ ಪ್ರವೇಶ ಪಡೆದುಕೊಂಡಿದೆ. ಹೀಗಾಗಿ ಮುಂದಿನ ಕೆಲ ಪಂದ್ಯಗಳಿಂದ ಧೋನಿ ವಿಶ್ರಾಂತಿ ಪಡೆದುಕೊಳ್ಳುವ ಸಾಧ್ಯತೆ ಕೂಡ ದಟ್ಟವಾಗಿ ಕಂಡು ಬರುತ್ತಿದೆ.

Last Updated : Apr 24, 2019, 5:41 PM IST

ABOUT THE AUTHOR

...view details