ಕೋಲ್ಕತ್ತಾ: ಟೀಂ ಇಂಡಿಯಾದ ಜನಪ್ರೀಯ ಕ್ರಿಕೆಟಿಗ ಎಂಎಸ್ ಧೋನಿ ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿ ಬಳಗ ಹೊಂದಿದ್ದಾರೆ. ಆದರೆ ಇಲ್ಲೊಬ್ಬ ಅಭಿಮಾನಿ ಅವರ ಹೆಸರಿನಲ್ಲಿ ಎಂಎಸ್ ಧೋನಿ ಎಂಬ ಹೋಟೆಲ್ ಆರಂಭಿಸಿದ್ದು, ಮಾಹಿ ಅಭಿಮಾನಿಗಳಿಗೆ ಉಚಿತವಾಗಿ ಊಟ, ತಿಂಡಿ ನೀಡ್ತಿದ್ದಾರೆ.
ಎಂಎಸ್ ಧೋನಿ HOTEL! ಇಲ್ಲಿ ಮಾಹಿ ಅಭಿಮಾನಿಗಳಿಗೆ ಎಲ್ಲವೂ ಫ್ರೀ! - ಊಟ
ವಿಶ್ವದೆಲ್ಲೆಡೆ ಲಕ್ಷಾಂತರ ಕ್ರೀಡಾಭಿಮಾನಿಗಳನ್ನು ಹೊಂದಿರುವ ಎಂಎಸ್ ಧೋನಿ ಎಲ್ಲರ ಅಚ್ಚುಮೆಚ್ಚಿನ ಅಟಗಾರ. ಅವರ ಮೇಲಿನ ಅಭಿಮಾನಕ್ಕಾಗಿ ಮಾಹಿ ಅಭಿಮಾನಿಯೋರ್ವ ಪಶ್ಚಿಮ ಬಂಗಾಳದಲ್ಲಿ ಹೋಟೆಲ್ ನಡೆಸುತ್ತಿದ್ದು, ಉಚಿತವಾಗಿ ಆಹಾರ ನೀಡುತ್ತಿದ್ದಾರೆ.
ಪಶ್ಚಿಮ ಬಂಗಾಳದ ಅಲಿಪುರ್ದ್ವಾರ್ ಜಿಲ್ಲೆಯಲ್ಲಿ ಈ ಹೋಟೆಲ್ ಇದೆ. ಶಂಭು ಬೊಸೆ ಎಂಬ ಎಂಎಸ್ ಅಭಿಮಾನಿ ಈ ಹೋಟೆಲ್ ನಡೆಸುತ್ತಿದ್ದು, ಅವರ ಅಭಿಮಾನಿಗಳೆಂದು ಈ ಹೋಟೆಲ್ಗೆ ಬರುವವರಿಗೆ ಉಚಿತವಾಗಿ ಆಹಾರ ನೀಡುತ್ತಾರೆ.
ವಿಶೇಷವೆಂದರೆ ಶಂಭು, ಪಂದ್ಯ ನಡೆಯುವ ಜಾಗಕ್ಕೆ ಹೋಗಿ ಇಲ್ಲಿಯವರೆಗೆ ಧೋನಿ ಆಟ ನೋಡಿದವನಲ್ಲ. ಬದಲಿಗೆ ತಮ್ಮ ಹೋಟೆಲ್ನಲ್ಲೇ ಟಿವಿ ಮುಂದೆ ಕುಳಿತುಕೊಂಡು ಮಾಹಿ ಆಟ ಕಣ್ತುಂಬಿಕೊಂಡು ಸಂಭ್ರಮಿಸಿದ್ದಾರೆ. ಭವಿಷ್ಯದಲ್ಲಿ ಧೋನಿ ಭೇಟಿಯಾಗಿ ಅವರಿಗೆ ತಮ್ಮ ಕೈಯಾರೆ ಮಾಡಿರುವ ಅನ್ನ, ಮೀನು ಸಾರು ನೀಡಬೇಕು ಎಂಬ ಮಹಾದಾಸೆ ಇಟ್ಟುಕೊಂಡಿದ್ದಾರೆ. ಈ ಹಿಂದೆ ಟೀ ಅಂಗಡಿ ಇಟ್ಟುಕೊಂಡಿದ್ದ ಈ ವ್ಯಕ್ತಿ, ಕಳೆದ ಕೆಲ ತಿಂಗಳಿಂದ ಹೋಟೆಲ್ ನಡೆಸುತ್ತಿದ್ದಾರೆ.