ಹೈದರಾಬಾದ್: ಟೀಮ್ ಇಂಡಿಯಾದ ಯಶಸ್ವಿ ನಾಯಕ ಎಂ.ಎಸ್.ಧೋನಿ ಒತ್ತಡದ ಸಂದರ್ಭವನ್ನು ನಿಭಾಯಿಸುವಲ್ಲಿ ನಿಸ್ಸೀಮ. ಆದರೆ ಹಲವಾರು ಬಾರಿ ಧೋನಿ ಸಲಹೆಗಳು ಕೈಕೊಟ್ಟಿವೆ ಎಂದು ಸ್ಪಿನ್ನರ್ ಕುಲ್ದೀಪ್ ಯಾದವ್ ಹೇಳಿದ್ದಾರೆ.
ಧೋನಿ ಸಲಹೆಗಳು ಹಲವು ಬಾರಿ ಕೈಕೊಟ್ಟಿದೆ... ಕುತೂಹಲಕಾರಿ ಮಾಹಿತಿ ಬಿಚ್ಚಿಟ್ಟ ಸ್ಪಿನ್ನರ್ - ಎಂ.ಎಸ್.ಧೋನಿ
2007ರ ಟಿ-20 ವಿಶ್ವಕಪ್ ಹಾಗೂ 2011ರ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಧೋನಿಯ ಟಿಪ್ಸ್ಗಳು ಅದೆಷ್ಟೋ ಬಾರಿ ವರ್ಕೌಟ್ ಆಗಿಲ್ಲ ಎಂದು ಕುಲ್ದೀಪ್ ಯಾದವ್ ತಿಳಿಸಿದ್ದಾರೆ.
ಧೋನಿ
2007ರ ಟಿ-20 ವಿಶ್ವಕಪ್ ಹಾಗೂ 2011ರ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಧೋನಿಯ ಟಿಪ್ಸ್ಗಳು ಅದೆಷ್ಟೋ ಬಾರಿ ವರ್ಕೌಟ್ ಆಗಿಲ್ಲ ಎಂದು ಕುಲ್ದೀಪ್ ತಿಳಿಸಿದ್ದಾರೆ.
ಧೋನಿ ಪಂದ್ಯ ನಡೆಯುತ್ತಿರುವ ವೇಳೆ ಹೆಚ್ಚೇನು ಮಾತನಾಡುವುದಿಲ್ಲ. ಅತ್ಯಂತ ಅಗತ್ಯ ಎಂದೆನಿಸಿದಲ್ಲಿ ಮಾತ್ರವೇ ಮಾತನಾಡುತ್ತಾರೆ. ಆದರೆ, ಧೋನಿ ಸಲಹೆ ಕೈಕೊಟ್ಟಾಗ ಅದನ್ನು ಅವರ ಬಳಿ ಹೇಳಲು ಸಾಧ್ಯವಾಗುವುದಿಲ್ಲ ಎಂದು ಟೀಮ್ ಇಂಡಿಯಾ ಸ್ಪಿನ್ನರ್ ಹೇಳಿದ್ದಾರೆ.