ಬೆಂಗಳೂರು: ಭಾರತ ಕ್ರಿಕೆಟ್ ತಂಡದ ನಾಯಕ ಧೋನಿ ಭಾರತ ಕ್ರಿಕೆಟ್ ತಂಡದ ನಾಯಕನಾದ ಮೇಲೆ ಹಲವಾರು ಪಂದ್ಯಗಳಲ್ಲಿ ಏಕಾಂಗಿಯಾಗಿ ಹೋರಾಟ ನಡೆಸಿ ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಆದರೆ ಧೋನಿಯ ನಿನ್ನೆಯ ಆಟ ಅಭಿಮಾನಿಗಳನ್ನು ಫಿದಾ ಆಗುವಂತೆ ಮಾಡಿದೆ.
ಪಂದ್ಯವನ್ನು ಒಂದು ರನ್ನಿಂದ ಸೋಲನುಭವಿಸಿದರಾದರು ಈ ಪಂದ್ಯದಲ್ಲಿ ಧೋನಿಯ ಪ್ರಯತ್ನವನ್ನು ಮೆಚ್ಚಿದ ಧೋನಿ ಫ್ಯಾನ್ಸ್ ಅಸಾಧ್ಯವಾದದ್ದನ್ನು ಸಾಧಿಸುವ ಧೋನಿ ನಮ್ಮ ದೇಶದ ಪ್ರಧಾನಿಯಾಗಲಿ ಎಂದು ಟ್ವೀಟ್ ಮಾಡುತ್ತಿದ್ದಾರೆ.
ಭಾನುವಾರ ಬೆಂಗಳೂರಿನಲ್ಲಿ ನಡೆದ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಕೇವಲ 6 ಓವರ್ಗಳಲ್ಲಿ ತಂಡದ ಪ್ರಮುಖ ಆಟಗಾರರನ್ನು ಕಳೆದುಕೊಂಡ ಸಿಎಸ್ಕೆ ಆರ್ಸಿಬಿಗೆ ಸುಲಭ ತುತ್ತಾಗಬಹುದೆಂಬ ಲೆಕ್ಕಾಚಾರ ಒಂದು ಕಡೆಯಾದರೆ, ಕ್ರೀಸ್ನಲ್ಲಿದ್ದ ಧೋನಿ ನೋಡಿ ಇನ್ನು ಪಂದ್ಯ ಜೀವಂತವಾಗಿದೆ ಎಂದವರ ಪ್ರಮಾಣವೇ ಹೆಚ್ಚಿತ್ತು. ಅದನ್ನು ಕೂಲ್ ಕ್ಯಾಪ್ಟನ್ ನಿಜ ಕೂಡ ಮಾಡಿದ್ದರು.
ಒಂದು ಕಡೆ ವಿಕೆಟ್ ಉರುಳುತ್ತಿದ್ದರು ತನ್ನ ತಾಳ್ಮೆ ಕಳೆದುಕೊಳ್ಳದ ಧೋನಿ ಪಂದ್ಯವನ್ನು ಕೊನೆಯ ಓವರ್ವರಗೂ ತೆಗೆದುಕೊಂಡು ಹೋದರಲ್ಲದೆ, ಕೊನೆಯ ಓವರ್ನಲ್ಲಿ ಬೇಕಿದ್ದ 26 ರನ್ಗಳಲ್ಲಿ 24 ರನ್ ಗಳಿಸಿದರು. 3 ಸಿಕ್ಸರ್ ಹಾಗೂ 1 ಫೋರ್ ಸಿಡಿಸಿದ್ದ ಧೋನಿ ಕೊನೆಯ ಎಸೆತದಲ್ಲಿ ಯಾಮಾರಿ ಬಾಲ್ ಬೀಟ್ ಮಾಡಿದರು. ಆದರೆ ಒಂದು ತೆಗೆದುಕೊಳ್ಳಲು ಪ್ರಯತ್ನಿಸಿದರಾದರು ಕೀಪರ್ ರನೌಟ್ ಮಾಡುವಲ್ಲಿ ಯಶಸ್ವಿಯಾಗಿ ಆರ್ಸಿಬಿಗೆ ಜಯ ಒಲಿಯಿತು.
ಧೋನಿಯ ಪ್ರಯತ್ನವನ್ನು ಮೆಚ್ಚಿರುವ ಕ್ರಿಕೆಟ್ ಅಭಿಮಾನಿಗಳ ಅಭಿಮಾನ ಅತಿರೇಕಕ್ಕೇರಿದ್ದು 'dhoniforPM' ಎಂದು ಟ್ವೀಟ್ ಮಾಡುತ್ತಿದ್ದಾರೆ.