ನವದೆಹಲಿ: ಬದಲಾದ ರಾಜಕೀಯ ವಿದ್ಯಮಾನದಲ್ಲಿ ಬಿಜೆಪಿಯ ಮೂರು ದಶಕಗಳ ಸಖ್ಯ ತೊರೆದು ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ಕಾಂಗ್ರೆಸ್ ಸೇರಿದ್ದರೆ ಇತ್ತ ಸಿನ್ಹಾ ಪತ್ನಿ ಪೂನಮ್ ಸಿನ್ಹಾ ಸಮಾಜವಾದಿ ಪಾರ್ಟಿ ಸೇರ್ಪಡೆಯಾಗಿದ್ದಾರೆ.
ಬದಲಾದ ರಾಜಕೀಯ ವಿದ್ಯಮಾನ, 'ಕೈ' ಹಿಡಿದ ಗಂಡ, ಸೈಕಲ್ಏರಿದ ಹೆಂಡತಿ
2019-04-16 18:53:41
'ಕೈ' ಹಿಡಿದ ಗಂಡ, ಸೈಕಲ್ ಏರಿದ ಹೆಂಡತಿ
ಸಮಾಜವಾದಿ ಮುಖ್ಯಸ್ಥ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ ಸಮ್ಮುಖದಲ್ಲಿ ಪೂನಮ್ ಸಿನ್ಹಾ ಲಖನೌನಲ್ಲಿ ಸಮಾಜವಾದಿ ಪಾರ್ಟಿಗೆ ಸೇರಿದ್ದಾರೆ.
ಲಖನೌ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆಗೆ ಕೇವಲ ಎರಡು ದಿನ ಬಾಕಿ ಉಳಿದಿರುವಂತೆ ಪೂನಮ್ ಸಿನ್ಹಾ ಸಮಾಜವಾದಿ ಪಾರ್ಟಿ ಸೇರಿದ್ದು ಕುತೂಹಲಕ್ಕೆ ಕಾರಣವಾಗಿದೆ. 69 ವರ್ಷದ ಪೂನಮ್ ಸಿನ್ಹಾ ಇದೇ ಮೊದಲ ಬಾರಿಗೆ ರಾಜಕೀಯಕ್ಕೆ ಧುಮುಕಿದ್ದು, ಮೂಲಗಳ ಪ್ರಕಾರ ಲಖನೌ ಕ್ಷೇತ್ರದಿಂದ ಸಮಾಜವಾದಿ ಪಾರ್ಟಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ.
ಪ್ರತಿಷ್ಠಿತ ಕ್ಷೇತ್ರ ಲಖನೌ:
ಬಿಜೆಪಿಯ ಭದ್ರಕೋಟೆಯಾಗಿರುವ ಲಖನೌ, 1991ರಿಂದ 2009ರ ತನಕ ದಿ. ಅಟಲ್ ಬಿಹಾರಿ ವಾಜಪೇಯಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆ ಬಳಿಕ ರಾಜನಾಥ್ ಸಿಂಗ್ ಗೆಲುವಿನ ಅಭಿಯಾನ ಮುಮದುವರೆಸಿದ್ದಾರೆ. ಇಂದು ರಾಜನಾಥ್ ಸಿಂಗ್ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.