ಕರ್ನಾಟಕ

karnataka

ETV Bharat / briefs

ಮತ ನೀಡಿದ್ದು ಮೋದಿಗೆ,ಆಮಿಷ ನಡೆದಿಲ್ಲ;ಅಭಿವೃದ್ದಿಗೆ ಹಗಲಿರುಳು ಶ್ರಮ: ಸಂಸದ ಮುನಿಸ್ವಾಮಿ - undefined

ಕೋಲಾರ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಸಂಸದ ಎಸ್.ಮುನಿಸ್ವಾಮಿ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಕೋಲಾರ ಸಂಸದ ಎಸ್.ಮುನಿಸ್ವಾಮಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಅಭಿನಂದನಾ ಸಮಾರಂಭ

By

Published : Jun 16, 2019, 1:32 PM IST

ಕೋಲಾರ:ಹಲವು ವರ್ಷಗಳಿಂದ ನಡೆದ ಅನ್ಯಾಯ, ಮೋಸಕ್ಕೆ ನ್ಯಾಯ ದೊರಕಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ನಿಮ್ಮ ಮನೆಯ ಮಗನಂತೆ ಕೆಲಸ ಮಾಡುತ್ತೇನೆ ಎಂದು ಕೋಲಾರ ಸಂಸದ ಎಸ್‌.ಮುನಿಸ್ವಾಮಿ ಕ್ಷೇತ್ರದ ಜನತೆಗೆ ಭರವಸೆ ನೀಡಿದರು.

ಕೋಲಾರ ಸಂಸದ ಎಸ್.ಮುನಿಸ್ವಾಮಿ ಅವರಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಅಭಿನಂದನೆ

ಬಂಗಾರಪೇಟೆ ಹೊರವಲಯದಲ್ಲಿರುವ ಆರ್​.ಆರ್.ಕಲ್ಯಾಣ ಮಂಟಪದಲ್ಲಿ ಬಿಜೆಪಿ ಸಂಸದ ಎಸ್.ಮುನಿಸ್ವಾಮಿ ಅವರಿಗೆ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು.

ಲೋಕಸಭೆ ಕ್ಷೇತ್ರಕ್ಕೆ ಅಂಟಿದ್ದ ಗ್ರಹಣ ಬಿಡಿಸಲು ಈ ಬಾರಿ ಜನತೆ ತೀರ್ಮಾನಿಸಿದ್ದರು. ಅದಕ್ಕಾಗಿ ಪಕ್ಷಾತೀತವಾಗಿ ಜಿಲ್ಲೆಯ ಎಲ್ಲಾ ಶಾಸಕರು ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದರು ಎಂದು ಚಿಂತಾಮಣಿ ಶಾಸಕ ಸುಧಾಕರ್ ಹೇಳಿದರು.

ಬಿಜೆಪಿಗೆ ಜನರು ಮತ ನೀಡಿದ್ದು ಮೋದಿಯನ್ನ ನೋಡಿ, ಅದು ಬಿಟ್ಟರೆ ಯಾವ ಹಣದ ಆಮಿಷಗಳೂ ನಡೆದಿಲ್ಲ. ಮಾಜಿ ಸಂಸದರ ಅನ್ಯಾಯಗಳು, ನಾಯಕರಿಗೆ ಮಾಡಿದ ಮೋಸಗಳೆಲ್ಲಾ ಗೊತ್ತಿದೆ. ಅತ್ಯಧಿಕ ಮತ ನೀಡಿ ಗೆಲ್ಲಿಸಿರುವ ಮತದಾರರ ಅಭಿವೃದ್ಧಿಗೆ ಹಗಲಿರುಳು ದುಡಿಯುತ್ತೇನೆ ಎಂದು ಸಂಸದ ಎಸ್.ಮುನಿಸ್ವಾಮಿ ಭರವಸೆ ನೀಡಿದ್ರು.

For All Latest Updates

TAGGED:

ABOUT THE AUTHOR

...view details