ಬೆಂಗಳೂರು: ಅಕ್ರಮವಾಗಿ ಐಸಿಯು ಬೆಡ್ ಬ್ಲಾಕ್ ದಂಧೆಯನ್ನು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಬಯಲಿಗೆಳೆದಿದ್ದು, ಈಗ ಮುಖ್ಯ ಕಾರ್ಯದರ್ಶಿಗಳು, ಗೃಹ ಸಚಿವರು ಈ ಬಗ್ಗೆ ಇನ್ನೂ ಚರ್ಚೆ ನಡೆಸ್ತಿದಾರೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ಬೆಡ್ ಬ್ಲಾಕಿಂಗ್ ದಂಧೆ: ಗೃಹ ಸಚಿವರು, ಮುಖ್ಯ ಕಾರ್ಯದರ್ಶಿ, ತೇಜಸ್ವಿ ಸೂರ್ಯ ಜತೆ ಸಿಎಂ ಸಭೆ - ಬೆಡ್ ಬ್ಲಾಕಿಂಗ್ ದಂಧೆ
ಬೆಡ್ ಅವ್ಯವಹಾರದ ಬಗ್ಗೆ ತಕ್ಷಣ ಕ್ರಮಕ್ಕೆ ಸೂಚನೆ ನೀಡಲಾಗಿದೆ. 1 ಗಂಟೆಗಳ ಕಾಲ ಇದೇ ವಿಚಾರ ಚರ್ಚೆ ಮಾಡಿದ್ದೇನೆ . ಯಾವುದೇ ಮುಲಾಜಿಲ್ಲದೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದ್ದಾರೆ.
BSY
ವಿಧಾನಸೌಧದಲ್ಲಿ ಯಡಿಯೂರಪ್ಪ ಮಾತನಾಡಿ, ಬೆಡ್ ಅವ್ಯವಹಾರದ ಬಗ್ಗೆ ತಕ್ಷಣ ಕ್ರಮಕ್ಕೆ ಸೂಚನೆ ನೀಡಲಾಗಿದೆ. 1 ಗಂಟೆಗಳ ಕಾಲ ಇದೇ ವಿಚಾರ ಚರ್ಚೆ ಮಾಡಿದ್ದೇನೆ . ಯಾವುದೇ ಮುಲಾಜಿಲ್ಲದೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಇಂದು ತೇಜಸ್ವಿ ಸೂರ್ಯ ಈ ಪ್ರಕರಣ ಬಯಲಿಗೆಳೆದಿದ್ದು, ಅಕ್ರಮವಾಗಿ ಬೆಡ್ ಬ್ಲಾಕ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಅವಶ್ಯಕತೆ ಇರುವವರಿಗೆ ಆಸ್ಪತ್ರೆ ಸಿಗುವುದಿಲ್ಲ ಎಂದು ಕಿಡಿಕಾರಿ ಮುಖ್ಯಮಂತ್ರಿ ಜೊತೆ ಸಭೆ ನಡೆಸಿದರು.
Last Updated : May 4, 2021, 9:27 PM IST