ಕರ್ನಾಟಕ

karnataka

ETV Bharat / briefs

ಕೊಪ್ಪಳ: ಆಯುಷ್ ಪದ್ಧತಿಗಳ ಕೈಪಿಡಿ ಬಿಡುಗಡೆ ಮಾಡಿದ ಸಂಸದ ಸಂಗಣ್ಣ ಕರಡಿ - MP Sanganna karadi latest news

ಕೊಪ್ಪಳದಲ್ಲಿ ಸಂಸದ ಸಂಗಣ್ಣ ಕರಡಿ ಅವರು ವಿವಿಧ ಆಯುಷ್ ಪದ್ಧತಿಗಳ ಕೈಪಿಡಿಯನ್ನು ಬಿಡುಗಡೆ ಮಾಡಿದರು.

Koppal
Koppal

By

Published : Jun 17, 2020, 6:37 PM IST

ಕೊಪ್ಪಳ:ವಿವಿಧ ಆಯುಷ್ ಪದ್ಧತಿಗಳ ಕೈಪಿಡಿಯನ್ನು ಸಂಸದ ಸಂಗಣ್ಣ ಕರಡಿ ಬಿಡುಗಡೆ ಮಾಡಿದರು.

ಜಿಲ್ಲಾಡಳಿತ ಭವನದಲ್ಲಿರುವ ಕಚೇರಿಯಲ್ಲಿ ಆಯುಷ್ ಇಲಾಖೆ ಹೊರ ತಂದಿರುವ ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ವಿವಿಧ ಆಯುಷ್‌ ಪದ್ಧತಿಗಳನ್ನು ಪರಿಚಯಿಸಿರುವ ಕೈಪಿಡಿ ಬಿಡುಗಡೆ ಮಾಡಿ, ಆಯುರ್ವೇದದ ಔಷಧ ಕಿಟ್‌ ಹಾಗೂ ರೋಗ ನಿರೋಧಕ ಮಾತ್ರೆಗಳನ್ನು ಆಶಾ‌ ಕಾರ್ಯಕರ್ತೆಯರಿಗೆ ವಿತರಿಸಿದರು

ಬಳಿಕ‌ ಮಾತನಾಡಿದ ಸಂಸದರು, ಆಯುರ್ವೇದ ಪದ್ಧತಿಯಲ್ಲಿನ ಔಷಧಗಳು ಅನೇಕ ಕಾಯಿಲೆಗಳನ್ನು ಗುಣಪಡಿಸುತ್ತವೆ. ಕೊರೊನಾ ಇರುವ ಈ ಸಮಯದಲ್ಲಿ ನಾವು ಜಾಗ್ರತೆಯಿಂದ ಇರಬೇಕು. ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಆಹಾರವನ್ನು ಸೇವಿಸುವಂತೆ ಸಲಹೆ ನೀಡಿದರು.

ಆಯುಷ್‌ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ABOUT THE AUTHOR

...view details