ಮೈಸೂರು:127 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಆಸ್ಪತ್ರೆಗೆ ಸಿದ್ದರಾಮಯ್ಯನವರು ಅನುದಾನ ನೀಡಿದ್ದಾರೆ ಎಂದು ಸಂಸದ ಪ್ರತಾಪಸಿಂಹ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ನೆನೆದರು.
ನಗರದ ಮೇಟಗಳ್ಳಿಯಲ್ಲಿ ನಿರ್ಮಾಣವಾದ ನೂತನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಂಕು ಸ್ಥಾಪನೆಯಾಗಿತ್ತು.127 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಆಸ್ಪತ್ರೆಗೆ ಸಿದ್ದರಾಮಯ್ಯನವರು ಅನುದಾನ ನೀಡಿದ್ದಾರೆ ಎಂದರು.
ಸಿದ್ದರಾಮಯ್ಯ ಅನುದಾನ ನೀಡಿದ ಆಸ್ಪತ್ರೆ ಇಂದು ಸೋಂಕಿತರ ಚಿಕಿತ್ಸೆಗೆ ಸಿದ್ಧ; ಪ್ರತಾಪ ಸಿಂಹ - Mp prathap simha
ಸಿದ್ದರಾಮಯ್ಯ ಕೊಡುಗೆಯಿಂದ ಕೊರೊನಾ ಸಂದರ್ಭದಲ್ಲಿ ಈ ಆಸ್ಪತ್ರೆ ಸೇವೆಗೆ ಸಿದ್ದವಾಗಿದೆ. ಅವರು ಮೈಸೂರಿನ ಬಗ್ಗೆ ಸಾಕಷ್ಟು ಕಾಳಜಿ ವಹಿಸಿ, ಅನುದಾನ ನೀಡಿದ್ದಾರೆ. ಇದಕ್ಕೆ ನಾನು ಸಿದ್ದರಾಮಯ್ಯ ಸಾಹೇಬರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.
![ಸಿದ್ದರಾಮಯ್ಯ ಅನುದಾನ ನೀಡಿದ ಆಸ್ಪತ್ರೆ ಇಂದು ಸೋಂಕಿತರ ಚಿಕಿತ್ಸೆಗೆ ಸಿದ್ಧ; ಪ್ರತಾಪ ಸಿಂಹ Mp pratap simha thank to siddaramaiah](https://etvbharatimages.akamaized.net/etvbharat/prod-images/768-512-06:53:26:1620307406-kn-mys-04-pratapsima-vis-ka10003-06052021184555-0605f-1620306955-644.jpg)
Mp pratap simha thank to siddaramaiah
ಸಿದ್ದರಾಮಯ್ಯ ಅನುದಾನ ನೀಡಿದ ಆಸ್ಪತ್ರೆ ಇಂದು ಸೋಂಕಿತರ ಚಿಕಿತ್ಸೆಗೆ ಸಿದ್ಧ; ಪ್ರತಾಪ ಸಿಂಹ
ಸಿದ್ದರಾಮಯ್ಯನವರು ಮೈಸೂರಿನ ಬಗ್ಗೆ ಸಾಕಷ್ಟು ಕಾಳಜಿ ಹೊಂದಿದ್ದಾರೆ
ಟ್ರೌಮಾ ಸೆಂಟರ್, ಜಯದೇವ ಆಸ್ಪತ್ರೆ, ನೂತನ ಜಿಲ್ಲಾಸ್ಪತ್ರೆಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅನುದಾನ ಕೊಟ್ಟಿದ್ದಾರೆ. ಅದೇ ರೀತಿ ಈ ಸೂಪರ್ ಸ್ಪೆಷಲಿಟಿ ಆಸ್ಪತ್ರೆಗೆ ಅನುದಾನ ಕೊಟ್ಟಿದ್ದಾರೆ. ಸಿದ್ದರಾಮಯ್ಯನವರ ಕೊಡುಗೆಯಿಂದ ಈ ಆಸ್ಪತ್ರೆ ಕೊರೊನಾ ಸಂದರ್ಭದಲ್ಲಿ ಸೇವೆಗೆ ಸಿದ್ದವಾಗಿದೆ. ಅವರು ಮೈಸೂರಿನ ಬಗ್ಗೆ ಸಾಕಷ್ಟು ಕಾಳಜಿ ವಹಿಸಿ, ಅನುದಾನ ನೀಡಿದ್ದಾರೆ. ಇದಕ್ಕೆ ನಾನು ಸಿದ್ದರಾಮಯ್ಯ ಸಾಹೇಬರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು.
Last Updated : May 6, 2021, 7:37 PM IST