ಮೈಸೂರು :ಔಷಧಿ ಖರೀದಿಗೆ ಕಾನೂನು ಅಡ್ಡ ಬರುತ್ತದೆ. ಆದರೆ, 28 ಲಕ್ಷ ಖರ್ಚು ಮಾಡಿ ಸ್ಮಿಮ್ಮಿಂಗ್ ಪೂಲ್ ನಿರ್ಮಿಸೋಕೆ ಕಾನೂನು ಅಡ್ಡ ಬರಲಿಲ್ವಾ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಂಸದ ಪ್ರತಾಪಸಿಂಹ ಕಿಡಿಕಾರಿದ್ದಾರೆ.
ತುಳಸಿದಾಸಪ್ಪ ಆಸ್ಪತ್ರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನ ಕೊರೊನಾ ಸಂಕಷ್ಟದಲ್ಲಿರುವಾಗ ಸ್ವಿಮ್ಮಿಂಗ್ಲ್ ಪೂಲ್ ನಿಮಗೆ ಬೇಕಿತ್ತಾ?ಪಾಪದ ಜನರನ್ನು ರಕ್ಷಿಸೋದು ಬಿಟ್ಟು ಮೋಜು, ಮಸ್ತಿಗೆ ಉತ್ತೇಜನ ಕೊಡುವ ಇಂತಹ ಅಧಿಕಾರಿಯಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಟೀಕಿಸಿದರು.
ಜಿಲ್ಲೆಯಲ್ಲಿ ಕೋವಿಡ್ ನಿರ್ವಹಣೆಗೆ ₹41 ಕೋಟಿ ಹಣ ಬಂದಿದೆ. ಅದರಲ್ಲಿ 39 ಕೋಟಿ ಖರ್ಚಾಗಿದೆ ಎಂದು ಹೇಳಿದ್ದೀರಿ. 39 ಕೋಟಿ ಯಾರಿಗೆ ಕೊಟ್ಟಿದ್ದೀರಿ, ಯಾವುದಕ್ಕೆ ಖರ್ಚು ಮಾಡಿದ್ದೀರಿ ಅಂತ ಮಾಹಿತಿ ಕೊಡಿ. ಜಿಲ್ಲಾಧಿಕಾರಿ ಹಾಗೂ ಡಿಹೆಚ್ಒ ಮೊದಲು ಲೆಕ್ಕ ಕೊಡಲಿ ಎಂದು ಗುಡುಗಿದರು.
ಕೋವಿಡ್ ಸಂಕಷ್ಟಕ್ಕೆ ಸ್ಪಂದಿಸಲೆಂದೇ ಪ್ರಧಾನಿ ದೇಶಾದ್ಯಂತ 1 ಲಕ್ಷ ವೆಂಟಿಲೇಟರ್ ಕೊಟ್ಟಿದ್ದಾರೆ. ಆದರೆ, ಈಗಲೂ ಕೂಡ ಇಲ್ಲದ ಸಬೂಬು ಹೇಳಿ ಅಳವಡಿಸದೆ ಹಾಗೆ ಇಟ್ಟಿದ್ದಾರೆ.