ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ಇತಿಹಾಸ ಪ್ರಸಿದ್ಧ ಶಕುನ ರಂಗನಾಥ ಸ್ವಾಮಿ ದೇವಾಲಯದ ಹುಂಡಿ ಒಡೆದು ಕಳ್ಳತನ ಮಾಡಲಾಗಿದೆ.
ಒಂದೇ ದೇವಾಲಯದಲ್ಲಿ ಸತತ ನಾಲ್ಕನೇ ಬಾರಿ ಹುಂಡಿ ಕಳ್ಳತನ - four times
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ಐತಿಹಾಸಿಕ ದೇವಸ್ಥಾನದ ಹುಂಡಿ ಒಡೆದು 4 ಲಕ್ಷಕ್ಕೂ ಅಧಿಕ ಮೊತ್ತದ ಹಣವನ್ನು ದೋಚಿದ್ದಾರೆ. ಇದೇ ದೇವಾಲಯದಲ್ಲಿ ನಾಲ್ಕನೇ ಬಾರಿ ಕಳ್ಳತನ ವಾಗುತ್ತಿರುವುದು.
ಐತಿಹಾಸಿಕ ಶಕುನ ರಂಗನಾಥ ದೇವಾಲಯ
ಅಂದಾಜು 4 ಲಕ್ಷಕ್ಕೂ ಹೆಚ್ಚು ಹಣವಿದ್ದ 4 ಹುಂಡಿಗಳನ್ನು ಒಡೆದಿದ್ದು, 8ಕ್ಕೂ ಹೆಚ್ಚು ಜನರು ಈ ಕೃತ್ಯದಲ್ಲಿ ಭಾಗವಹಿಸಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ನಾಲ್ಕನೇ ಬಾರಿ ಇದೇ ದೇವಾಲಯಕ್ಕೆ ಸಂಬಂಧಿಸಿದಂತೆ ಹುಂಡಿ ಕಳ್ಳತನ ಪ್ರಕರಣ ದಾಖಲಾಗಿದೆ.
ಸಖರಾಯಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ತಂಡದಿಂದ ತೀವ್ರ ತನಿಖೆ ಮುಂದುವರೆದಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.