ನವದೆಹಲಿ:ಬೇಸಿಗೆಯ ಉರಿಬಿಸಿಲಿಗೆ ಕಂಗೆಟ್ಟಿರುವ ದೇಶದ ಜನತೆಗೆ ಭಾರತೀಯ ಹವಾಮಾನ ಇಲಾಖೆ ಬೇಸರ ದ ಸುದ್ದಿಯೊಂದನ್ನು ತಿಳಿಸಿದೆ.
ಭಾರತೀಯ ಹವಾಮಾನ ಇಲಾಖೆಯ ಇಂದಿನ ಪ್ರಕಟಣೆಯ ಪ್ರಕಾರ, ಮುಂಗಾರು ಜೂನ್ 8 ರಂದು ಕೇರಳ ಪ್ರವೇಶಿಸಲಿದೆ ಎಂದಿದೆ. ಈ ಮೊದಲು ಜೂನ್ 6ರಂದು ಮುಂಗಾರು ಆಗಮನವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು.
ಮುಂದಿನ 96 ಗಂಟೆಯಲ್ಲಿ ಮಾನ್ಸೂನ್ ಕೇರಳಕ್ಕೆ ಪ್ರವೇಶ ಪಡೆಯಲಿದ್ದು, ಇದಾದ 24 ಗಂಟೆಗಳ ತರುವಾಯ ದೇಶದ ಹಲವೆಡೆ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಪೂರ್ಣ ಪ್ರಮಾಣದ ಮುಂಗಾರು ಆಗಮನಕ್ಕೂ ಮುನ್ನ ಜಮ್ಮು ಮತ್ತು ಕಾಶ್ಮೀರ, ಅಸ್ಸೋಂ, ಹಿಮಾಚಲ ಪ್ರದೇಶ, ಮೇಘಾಲಯ, ನಾಗಾಲ್ಯಾಂಡ್, ಕೇರಳ, ತೆಲಂಗಾಣ, ಕರ್ನಾಟಕ, ಸಿಕ್ಕಿಂ,ತಮಿಳುನಾಡು ಸೇರಿದಂತೆ ದೇಶದ ಹಲವೆಡೆ ಮಳೆಯ ಸಿಂಚನವಾಗಿದೆ.