ನವದೆಹಲಿ :ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್ಡಿಎ ಪ್ರಚಂಡ ಗೆಲುವು ದಾಖಲು ಮಾಡಿದೆ. ಸಹಜವಾಗಿಯೇ ಮೇ 30ರಂದು ಪದಗ್ರಹಣ ಸಮಾರಂಭ ಕೂಡ ಅದ್ಧೂರಿಯಾಗಿಯೇ ನಡೆಯಲಿದೆ.
ಪ್ರಚಂಡ ಗೆಲುವಿನ ಬಳಿಕ ಇವತ್ತು ವಾರಣಾಸಿಗೆ ಮೋದಿ.. 'ನಮೋ' ವಿಶ್ವನಾಥ, ನಮಾಮಿ ಗಂಗೆ!
ಸಂಜೆ 7ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಮೋದಿ ಮತ್ತೊಂದು ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ನಮೋ ಜತೆ ಕೆಲ ಸಂಪುಟ ಸಚಿವರು ಪ್ರತಿಜ್ಞಾವಿಧಿ ಸ್ವೀಕಾರ ಮಾಡಲಿರುವ ಕಾರಣ, ಯಾರೆಲ್ಲ ಅವರ ಸಂಪುಟ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಕುತೂಹಲ ಈಗಾಗಲೇ ಎಲ್ಲರಲ್ಲೂ ಮೂಡಿದೆ.
ಗಾಂಧಿನಗರದಲ್ಲಿ ಅಭೂತಪೂರ್ವ ಗೆಲುವು ದಾಖಲು ಮಾಡಿರುವ ಅಮಿತ್ ಶಾ ಗೃಹ ಖಾತೆ ಪಡೆದುಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇದರ ಮಧ್ಯೆ ಅನಾರೋಗ್ಯದಿಂದ ಬಳಲುತ್ತಿರುವ ಸುಷ್ಮಾ ಸ್ವರಾಜ್ ಹಾಗೂ ಅರುಣ್ ಜೇಟ್ಲಿ ಮೋದಿ ಸಂಪುಟದಿಂದ ದೂರ ಉಳಿಯುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.
ಉಳಿದಂತೆ ರಾಜನಾಥ್ ಸಿಂಗ್, ಪಿಯೂಷ್ ಗೋಯೆಲ್, ಸ್ಮೃತಿ ಇರಾನಿ, ನಿತಿನ್ ಗಡ್ಕರಿ, ರವಿಶಂಕರ್ ಪ್ರಸಾದ್, ನಿರ್ಮಾಲಾ ಸೀತಾರಾಮನ್, ಪ್ರಕಾಶ್ ಜಾವ್ಡೇಕರ್ ಹಾಗೂ ಜೆಪಿ ನಡ್ಡಾ ಮೋದಿ ಸಂಪುಟ ಸೇರಿಕೊಳ್ಳುವ ಸಾಧ್ಯತೆ ಇದೆ. ಇದರ ಮಧ್ಯೆ ಕರ್ನಾಟಕದಿಂದಲೂ ಮೋದಿ ಸಂಪುಟಕ್ಕೆ ಸೇರಲು ಭರ್ಜರಿ ಕಸರತ್ತು ನಡೆದಿದೆ. ಡಿ ವಿ ಸದಾನಂದಗೌಡ, ಶೋಭಾ ಕರಂದ್ಲಾಜೆ, ಸುರೇಶ್ ಅಂಗಡಿ, ಶಿವಕುಮಾರ್ ಉದಾಸಿ, ಡಾ. ಉಮೇಶ್ ಜಾಧವ್, ಪ್ರಹ್ಲಾದ್ ಜೋಶಿ, ರಮೇಶ್ ಜಿಗಜಿಣಗಿ ಸೇರಿದಂತೆ ಹಲವರು ಚಾನ್ಸ್ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
2014ರ ಲೋಕಸಭಾ ಚುನಾವಣೆಗೆ ಹೋಲಿಸಿದ್ಕೆರೇ ರಾಜ್ಯದಿಂದ ಈ ಸಲ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿದ ಕಾರಣ, ಮೋದಿ ಸಂಪುಟದಲ್ಲಿ ಹೆಚ್ಚುವರಿ ಸ್ಥಾನ ಸಿಗುವ ಸಾಧ್ಯತೆ ಕೂಡ ಇದೆ.