ಕೋಲ್ಕತಾ: ಪ್ರಧಾನಿ ನರೇಂದ್ರ ಮೋದಿ ಅವರ ಕಪಾಳಕ್ಕೆ ಬಾರಿಸಲು ಬಯಸುತ್ತೇನೆ ಎನ್ನುವ ಮೂಲಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ.
ಸಾರ್ವಜನಿಕ ರಾಲಿಯೊಂದರಲ್ಲಿ ಮಾತನಾಡಿದ ದೀದಿ, ಪ್ರಧಾನಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ಮೋದಿ ಅವರು ಬಂಗಾಳಕ್ಕೆ ಬಂದು ನನ್ನನ್ನು ದೊಡ್ಡ ಸುಲಿಗೆಕೋರಳು ಎಂದು ಹೇಳುತ್ತಾರೆ. ಅವರ ಕಪಾಳಕ್ಕೆ ಹೊಡೆಯಲು ನಾನು ಬಯಸುತ್ತೇನೆ. ಪ್ರಜಾಪ್ರಭುತ್ವದ ಕಪಾಳಮೋಕ್ಷ ಅವರಿಗೆ ಅಗತ್ಯವಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಮೋದಿ ಅವರನ್ನು ದುರ್ಯೋಧನ, ರಾವಣನಿಗೆ ಹೋಲಿಸಿದರು.