ಕರ್ನಾಟಕ

karnataka

ETV Bharat / briefs

ಮೋದಿ ಮತ್ತೆ ಪ್ರಧಾನಿ ಆಗ್ತಿರೋದಕ್ಕೆ ಅಭಿಮಾನಿಯಿಂದ ಇಂಥ ಕಷ್ಟದ ಹರಕೆನಾ...! - ಚಿಕ್ಕೋಡಿ

ಮೋದಿ ಅವರು ಕೇಂದ್ರದ ಚುಕ್ಕಾಣಿಯನ್ನು ಮತ್ತೊಮ್ಮೆ ಹಿಡಿಯಲಿ ಎಂದು ಹರಕೆ ಕಟ್ಟಿಕೊಂಡಿದ್ದ ಅಭಿಮಾನಿ ಆಸೆ ಈಡೇರಿದೆ. ಹೀಗಾಗಿ ಬೆಳಗಾವಿಯಲ್ಲಿ ಜಿಲ್ಲೆಯ ಅಭಿಮಾನಿ ತನ್ನ ಹರಕೆಯನ್ನು ತೀರಿಸಿದ್ದಾನೆ. ಈತ ಹರಕೆ ತೀರಿಸಿದ್ದನ್ನು ನೋಡಿದ್ರೆ ಮೈ ಜುಮ್​ ಎನ್ನುವಂತಿದೆ.

ಹರಕೆ ತೀರಿಸಿದ ಮೋದಿ ಅಭಿಮಾನಿ

By

Published : May 29, 2019, 11:24 PM IST

ಚಿಕ್ಕೋಡಿ: ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿಯಾಗಲೆಂದು ತಾಲೂಕಿನ ಮೂಡಲಗಿಯ ಅಭಿಮಾನಿವೋರ್ವ ತುಂಬ ಕಷ್ಟದ ಹರಕೆ ಕಟ್ಟಿಕೊಂಡಿದ್ದ. ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನಿ ಆಗ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಈ ವ್ಯಕ್ತಿ ತನ್ನ ಹರಕೆಯನ್ನು ತೀರಿಸಿದ್ದಾನೆ.

ಹರಕೆ ತೀರಿಸಿದ ಮೋದಿ ಅಭಿಮಾನಿ
ಹೌದು, ಬಿಜೆಪಿ ಭಾರಿ ಬಹುಮತದೊಂದಿಗೆ ಕೇಂದ್ರದ ಗದ್ದುಗೆ ಏರಿದ್ದರಿಂದ ಮೂಡಲಗಿಯ ಅಭಿಮಾನಿ ಸುರೇಶ ಬೆಳವಿ ಎಂಬಾತ ಒಡೆದ ಗಾಜಿನ ಮೇಲೆ ನಡೆದು ಹರಕೆ ತೀರಿಸಿದ್ದಾನೆ.

ಗುರುವಾರ (ಮೇ 30) ರಂದು ಪ್ರಧಾನಿ ಮೋದಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಯ ವಿಶೇಷ ಹಾಗೂ ಕಠಿಣವಾಗಿರುವ ಹರಕೆಯನ್ನು ತೀರಿಸಿ ಗಮನ ಸೆಳೆದಿದ್ದಾನೆ. ಈ ದೃಶ್ಯ ನೋಡುಗರಿಗೆ ಭಯ ಮೂಡಿಸುವಂತಿದೆ.

ABOUT THE AUTHOR

...view details