ಕರ್ನಾಟಕ

karnataka

ETV Bharat / briefs

ಮೋದಿ ಮತ್ತೆ ಪ್ರಧಾನಿ ಆಗಿದ್ದಕ್ಕೆ ಸಂತಸ: ಉಚಿತ ಹಾಲು, ಸಿಹಿ ಹಂಚಿದ ಅಭಿಮಾನಿ - etv bharata

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದಿದ್ದಕ್ಕೆ ಬೆಳಗಾವಿ ಹಾಲಿನ ಡೈರಿ ಮಾಲೀಕ ಧನರಾಜ್ ದಾವಲೆ ಹಾಲು ಮತ್ತು ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದ್ದಾರೆ

ಮೋದಿ ಅಭಿಮಾನಿಯಿಂದ ಉಚಿತ ಹಾಲು, ಸಿಹಿ ಹಂಚಿಕೆ

By

Published : May 25, 2019, 3:20 AM IST

ಬೆಳಗಾವಿ : ತೀವ್ರ ಕುತೂಹಲ ಮೂಡಿಸಿದ್ದ ಲೋಕಸಭಾ ಫಲಿತಾಂಶ ಗುರುವಾರ ಹೊರ ಬಿದ್ದಿದ್ದು, ಬಿಜೆಪಿ ಮತ್ತೊಮ್ಮೆ ಅಧಿಕಾರ ವಹಿಸಲು ಸಕಲ ಸನ್ನದ್ಧವಾಗಿದೆ. ಇದೇ ಖುಷಿಯಲ್ಲಿ ಮೋದಿ ಅಭಿಮಾನಿ ಒಬ್ಬರು ನಗರದಲ್ಲಿ ಜನರಿಗೆ ಉಚಿತ ಹಾಲು ಹಾಗೂ ಸಿಹಿ ಹಂಚಿ ಸಂಭ್ರಮಿಸಿದರು.

ಮೋದಿ ಅಭಿಮಾನಿಯಿಂದ ಉಚಿತ ಹಾಲು, ಸಿಹಿ ಹಂಚಿಕೆ

ಸದಾಶಿವನಗರದ ಹಾಲಿನ ಡೈರಿ ಮಾಲೀಕ ಧನರಾಜ್ ದಾವಲೆ ಎಂಬುವವರು ನರೇಂದ್ರ ಮೋದಿ ಪ್ರಧಾನಿಯಾಗಿರುವ ಸಂತೋಷದಲ್ಲಿ ಸುಮಾರು 100 ಲೀಟರ್ ಹಾಲೂ ಹಾಗೂ 25 ಕೆಜಿ ಜಿಲೇಬಿ ಹಂಚುವ ಮೂಲಕ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

2014ರಲ್ಲಿಯೂ ಮೋದಿ ಪ್ರಧಾನಿಯಾದಾಗ ಇದೇ ರೀತಿ ಹಾಲು ಹಂಚಿದ್ದರಂತೆ.

ABOUT THE AUTHOR

...view details