ಕರ್ನಾಟಕ

karnataka

ETV Bharat / briefs

ಮೋದಿ ಬಾಯಲ್ಲಿ ಜೈ ಶ್ರೀರಾಮ್​ ಘೋಷಣೆ... ಭಾರತ್​ ಮಾತಾ ಅನುರಣನ...!

ಇಂದು ಪ್ರಧಾನಿ ಮೋದಿ, ಅಯೋಧ್ಯೆ ಸೇರಿದಂತೆ ಹಲವು ಕಡೆ ಬಹಿರಂಗ ರ‍್ಯಾಲಿ  ನಡೆಸಿದರು.  ಕಳೆದ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ಕಾನೂನಿನ ಪ್ರಕಾರವೇ ರಾಮಮಂದಿರ ನಿರ್ಮಾಣ ಮಾಡಲಾಗುವುದು ಎಂದಿದ್ದ ಬಿಜೆಪಿ ಅಭಿವೃದ್ಧಿ ಅಜೆಂಡಾ ಇಟ್ಟುಕೊಂಡು ಪ್ರಚಾರ ನಡೆಸಿತ್ತು.

ಮೋದಿ

By

Published : May 1, 2019, 1:15 PM IST

ಅಂಬೇಡ್ಕರ್​ನಗರ(ಯು.ಪಿ): ಉತ್ತರಪ್ರದೇಶ ಗೆದ್ದರೆ ಇಡೀ ದೇಶವನ್ನೇ ಗೆದ್ದಂತೆ. ಹೀಗಾಗಿ ಬಿಜೆಪಿ ಈ ಸಲವೂ ಉತ್ತರದಲ್ಲಿ ಕಮಾಲ್ ಮಾಡಲು ಇನ್ನಿಲ್ಲದಂತೆ ಶ್ರಮಿಸುತ್ತಿದೆ. ಪಿಎಂ ಮೋದಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯದಾದ್ಯಂತ ತಿರುಗಾಟ ನಡೆಸಿದ್ದಾರೆ.

ಇಂದು ಪ್ರಧಾನಿ ಮೋದಿ, ಅಂಬೇಡ್ಕರ್​ ನಗರ, ಅಯೋಧ್ಯೆ ಸೇರಿದಂತೆ ಹಲವು ಕಡೆ ಬಹಿರಂಗ ರ‍್ಯಾಲಿ ನಡೆಸಿದರು. ಕಳೆದ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ಕಾನೂನಿನ ಪ್ರಕಾರವೇ ರಾಮಮಂದಿರ ನಿರ್ಮಾಣ ಮಾಡಲಾಗುವುದು ಎಂದಿದ್ದ ಬಿಜೆಪಿ ಅಭಿವೃದ್ಧಿ ಅಜೆಂಡಾ ಇಟ್ಟುಕೊಂಡು ಪ್ರಚಾರ ನಡೆಸಿತ್ತು.

ಇನ್ನು ಈ ಲೋಕಸಭಾ ಚುನಾವಣೆಯ ನಾಲ್ಕು ಹಂತಗಳ ಮತದಾನಕ್ಕೂ ಮುನ್ನ ನಡೆದ ಪ್ರಚಾರ ಸಭೆಗಳಲ್ಲಿ ಪ್ರಧಾನಿ ಮೋದಿ ಅಯೋಧ್ಯೆ ಹಾಗೂ ರಾಮನ ವಿಚಾರಗಳ ಬಗ್ಗೆ ಅಷ್ಟಾಗಿ ಪ್ರಸ್ತಾಪ ಮಾಡಿರಲಿಲ್ಲ. ಆದರೆ, ಅಂಬೇಡ್ಕರ್​ ನಗರದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಇದೇ ಮೊದಲ ಬಾರಿಗೆ ಭಾರತ್​ ಮಾತಾಕಿ ಜೈ ಘೋಷಣೆಗಿಂತ ಮೊದಲು ಜೈ ಶ್ರೀರಾಮ್​ ಘೋಷಣೆಯನ್ನು ಹಾಕಿದರು. ಈ ಮೂಲಕ ರಾಮನ ಜಪ ಮಾಡಿ ಮತದಾರರ ಸೆಳೆಯುವ ಪ್ರಯತ್ನ ಮಾಡಿದರು.

ಬಹುತೇಕ ಅಯೋಧ್ಯಾ ವಿಷಯ ಮರೆತೇ ಹೋಯಿತಾ ಎಂಬ ಅನುಮಾನಗಳ ನಡುವೆ ಪ್ರಧಾನಿ ಮೋದಿ ರಾಮನ ಜಪ ಮಾಡಿದ್ದಾರೆ.

ABOUT THE AUTHOR

...view details