ನವದೆಹಲಿ: ಫಣಿ ಚಂಡಮಾರುತ ಬಗ್ಗೆ ಪ್ರಧಾನಿ ಮೋದಿ ಯಾವುದೇ ರೀತಿಯ ಮಾಹಿತಿಯನ್ನು ಪಡೆದಿಲ್ಲ ಎನ್ನುವ ಟಿಎಂಸಿಯ ಹೇಳಿಕೆಯನ್ನು ಪ್ರಧಾನಿ ಕಾರ್ಯಾಲಯ ತಳ್ಳಿಹಾಕಿದೆ.
ಮೋದಿ ಎರಡು ಬಾರಿ ಕರೆ ಮಾಡಿದರೂ ದೀದಿ ಉತ್ತರಿಸಿಲ್ಲ... ಪ್ರಧಾನಿ ಕಾರ್ಯಾಲಯ ಸ್ಪಷ್ಟನೆ - ಪ್ರಧಾನಿ ಕಾರ್ಯಾಲಯ
ತೃಣಮೂಲ ಕಾಂಗ್ರೆಸ್ ಹೇಳಿಕೆಯನ್ನು ಅಲ್ಲಗಳೆದಿರುವ ಪ್ರಧಾನಿ ಕಾರ್ಯಾಲಯ, ಪ್ರಧಾನಿ ಮೋದಿ ಎರಡು ಬಾರಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ದೂರವಾಣಿ ಮೂಲಕ ಸಂಪರ್ಕಿಸುವ ಪ್ರಯತ್ನ ಮಾಡಿದ್ದರು. ಆದರೆ ಎರಡು ಬಾರಿಯೂ ದೀದಿ ಕರೆಗೆ ಉತ್ತರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮೊದಲ ಬಾರಿಗೆ ಕರೆ ಮಾಡಿದಾಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರವಾಸದಲ್ಲಿದ್ದಾರೆ, ಬಳಿಕ ಕರೆ ಮಾಡಲಾಗುವುದು ಎನ್ನುವ ಉತ್ತರ ಬಂದಿದೆ. ಎರಡನೇ ಬಾರಿಯೂ ಕರೆ ಮಾಡಿದಾಗ ನಾವೇ ಕರೆ ಮಾಡುವುದಾಗಿ ಮುಖ್ಯಮಂತ್ರಿ ಕಾರ್ಯಾಲಯ ಸಿಬ್ಬಂದಿ ಉತ್ತರಿಸಿದ್ದಾರೆ ಆದರೆ ಆ ಬಳಿಕ ಯಾವುದೇ ಕರೆ ಬಂದಿಲ್ಲ ಎಂದು ಪ್ರಧಾನಿ ಕಾರ್ಯಾಲಯ ಟಿಎಂಸಿ ಹೇಳಿಕೆಗೆ ಸ್ಪಷ್ಟನೆ ನೀಡಿದೆ.