ಕರ್ನಾಟಕ

karnataka

ETV Bharat / briefs

ಮೋದಿ ಬಯೋಪಿಕ್ ಬಿಡುಗಡೆಗೆ ಮುಹೂರ್ತ ಫಿಕ್ಸ್​..! - ಚುನಾವಣಾ ನೀತಿ ಸಂಹಿತೆ

ಚುನಾವಣಾ ನೀತಿ ಸಂಹಿತೆ ಹಾಗೂ ಪ್ರತಿಪಕ್ಷಗಳ ತೀವ್ರ ಒತ್ತಡದಿಂದ ಮೋದಿ ಬಯೋಪಿಕ್ ಬಿಡುಗಡೆ ಮುಂದೂಡುತ್ತಲೇ ಬರಲಾಗಿತ್ತು. ರಿಲೀಸ್ ಮಾಡದಂತೆ ತಡೆಕೋರಿ ಸುಪ್ರೀಂ ಕೋರ್ಟ್​ನಲ್ಲೂ ಅರ್ಜಿ ಸಲ್ಲಿಕೆಯಾಗಿತ್ತು.

ಮೋದಿ ಬಯೋಪಿಕ್

By

Published : May 3, 2019, 10:55 AM IST

ನವದೆಹಲಿ: ಬಾಲಿವುಡ್​​ನ ಬಹುನಿರೀಕ್ಷಿತ ನರೇಂದ್ರ ಮೋದಿ ಬಯೋಪಿಕ್ ಬಿಡುಗಡೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದೆ.

ಚುನಾವಣಾ ನೀತಿ ಸಂಹಿತೆ ಹಾಗೂ ವಿಪಕ್ಷಗಳ ತೀವ್ರ ಒತ್ತಡದಿಂದ ಮೋದಿ ಬಯೋಪಿಕ್ ಬಿಡುಗಡೆಯನ್ನು ಮುಂದೂಡುತ್ತಲೇ ಬಂದಿತ್ತು. ರಿಲೀಸ್ ಮಾಡದಂತೆ ತಡೆಕೋರಿ ಸುಪ್ರೀಂ ಕೋರ್ಟ್​ನಲ್ಲೂ ಅರ್ಜಿ ಸಲ್ಲಿಕೆಯಾಗಿತ್ತು.

ಸದ್ಯ ಎಲ್ಲ ಅಡ್ಡಿ-ಆತಂಕಗಳನ್ನು ನಿವಾರಿಸಿ ಮೋದಿ ಬಯೋಪಿಕ್ ಮೇ 24ರಂದು ವಿಶ್ವಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ. ವಿಶೇಷವೆಂದರೆ ಮೇ 23ರಂದು ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯಲಿದ್ದು ಮರುದಿನವೇ ಮೋದಿ ಸಿನಿಮಾ ತೆರೆಗಪ್ಪಳಿಸಲಿದೆ.

ಎಲ್ಲ ಅಡೆತಡೆಗಳನ್ನು ಮೀರಿ ನಾವು ಇದೇ 24ರಂದು ಬರುತ್ತಿದ್ದೇವೆ ಎಂದು ನಿರ್ಮಾಪಕ ಸಂದೀಪ್ ಸಿಂಗ್ ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ.

ಮೇ 19ರಂದು ಕೊನೆಯ ಹಂತದ ಮತದಾನ ಪ್ರಕ್ರಿಯೆ ನಡೆಯಲಿದ್ದು, ಆ ಬಳಿಕ ದೊರೆಯುವ ನಾಲ್ಕು ದಿನದಲ್ಲಿ ಚಿತ್ರದ ಪ್ರಚಾರ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

ಒಮಂಗ್ ಕುಮಾರ್ ನಿರ್ದೇಶನದ ಮೋದಿ ಬಯೋಪಿಕ್​ನಲ್ಲಿ ಖ್ಯಾತ ನಟ ವಿವೇಕ್ ಒಬೆರಾಯ್ ಮೋದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೊಮನ್ ಇರಾನಿ, ಮನೋಜ್ ಜೋಶಿ, ಝರೀನಾ ವಹಾಬ್​ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ABOUT THE AUTHOR

...view details