ಕರ್ನಾಟಕ

karnataka

ETV Bharat / briefs

ಐಎಂಎಲ್​​​ಸಿ ಪ್ರಕಾಶ್ ರಾಥೋಡ್​​ ಹಾಗೂ ಪತ್ನಿ​​​​ಗೆ ಕೊರೊನಾ ಪಾಸಿಟಿವ್ - ವಿಧಾನಪರಿಷತ್ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್

ಅನಾರೋಗ್ಯ ಕಾಡಿದ ಹಿನ್ನೆಲೆ ತಪಾಸಣೆಗೆ ಒಳಗಾಗಿದ್ದಾಗ ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ಇಬ್ಬರೂ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ.

Mlc prakashvrathod and his wife tested corona positive
Mlc prakashvrathod and his wife tested corona positive

By

Published : Apr 29, 2021, 3:40 PM IST

ಬೆಂಗಳೂರು:ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಹಾಗೂ ಅವರ ಪತ್ನಿ ಡಾ. ಸುಜಾತಾ ರಾಥೋಡ್​​ಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ.

ಅನಾರೋಗ್ಯ ಕಾಡಿದ ಹಿನ್ನೆಲೆ ತಪಾಸಣೆಗೆ ಒಳಗಾಗಿದ್ದಾಗ ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ಇಬ್ಬರೂ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ.

ಕಳೆದ ಒಂದೆರಡು ದಿನಗಳಲ್ಲಿ ತಮ್ಮ ಸಂಪರ್ಕಕ್ಕೆ ಬಂದವರು ಸ್ವಯಂ ತಪಾಸಣೆಗೆ ಒಳಗಾಗಿ ಹಾಗೂ ಕ್ವಾರಂಟೈನ್ ಆಗಿ ಎಂದು ಪ್ರಕಾಶ್ ರಾಥೋಡ್ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿ ಮನವಿ ಮಾಡಿದ್ದಾರೆ. ಕಾಂಗ್ರೆಸ್​​ನ ಹಲವು ನಾಯಕರು ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ.

For All Latest Updates

ABOUT THE AUTHOR

...view details