ಕರ್ನಾಟಕ

karnataka

By

Published : Jun 18, 2020, 10:47 PM IST

ETV Bharat / briefs

'ಸಿದ್ದಾಂತ ಶಿಖಾಮಣಿ' ದಾರ್ಶನಿಕ ಕೃತಿ ಬಿಡುಗಡೆ ಮಾಡಿದ ನೂತನ ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ

ಶ್ರೀ ಕಾಶಿ ಪೀಠದ ಡಾ.ಚಂದ್ರಶೇಖರ ಪಂಡಿತರಾದ್ಯ ಶಿವಾಚಾರ್ಯ ಅವರು ಸಂಸ್ಕ್ರತದಲ್ಲಿ ಬರೆದ 'ಸಿದ್ದಾಂತ ಶಿಖಾಮಣಿ' ದಾರ್ಶನಿಕ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವ ಡಾ.ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಅವರ ಕೃತಿಯನ್ನು ನೂತನ ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಲೋಕಾರ್ಪಣೆ ಮಾಡಿದರು.

Mlc iranna kadadi released siddantha shikhamani book
Mlc iranna kadadi released siddantha shikhamani book

ಚಿಕ್ಕೋಡಿ:ಡಾ. ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯರ ಕನ್ನಡ ಅನುವಾದಿತ 'ಸಿದ್ಧಾಂತ ಶಿಖಾಮಣಿ' ದಾರ್ಶನಿಕ ಕೃತಿಯನ್ನು ನೂತನ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಬಿಡುಗಡೆ ಮಾಡಿದರು.

ತಾಲೂಕಿನ ಯಡೂರು ಮಠದಲ್ಲಿ ಶ್ರೀ ಕಾಶಿ ಪೀಠದ ಡಾ.ಚಂದ್ರಶೇಖರ ಪಂಡಿತರಾದ್ಯ ಶಿವಾಚಾರ್ಯ ಅವರು ಸಂಸ್ಕ್ರತದಲ್ಲಿ ಬರೆದ ಸಿದ್ದಾಂತ ಶಿಖಾಮಣಿ ದಾರ್ಶನಿಕ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವ ಡಾ. ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಅವರ ಕೃತಿಯನ್ನು ಬಿಡುಗಡೆ ಮಾಡಿದ ಬಳಿಕ‌ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಇಂತಹ ಮಹಾಸ್ವಾಮಿಜಿಗಳು ಬರೆದ ಕೃತಿಯನ್ನು ಬಿಡುಗಡೆ ಮಾಡುತ್ತಿರುವದು ನನ್ನ ಸೌಭಾಗ್ಯ.

ಯಡೂರ ಮಠದ ಸ್ವಾಮೀಜಿಗಳು ಈ ಭಾಗದಲ್ಲಿ ಸಾಕಷ್ಟು ಸಮಾಜ ಮುಖೇನ ಕಾರ್ಯ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಶ್ರೀ ಮಠ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡಿದೆ. ಅದರಂತೆ ಇನ್ನಷ್ಟು ಒಳ್ಳೆ ಕೆಲಸಗಳನ್ನು ಮಾಡಲಿ ಎಂದರು.

ABOUT THE AUTHOR

...view details