ಕರ್ನಾಟಕ

karnataka

ETV Bharat / briefs

ಕಾಂಗ್ರೆಸ್ ಶಾಸಕರನ್ನು ಕರೆದುಕೊಳ್ಳುವ ಮೊದಲೇ ಯೋಚಿಸಬೇಕಿತ್ತು: ಈಶ್ವರಪ್ಪಗೆ ದೇಶಪಾಂಡೆ ಟಾಂಗ್ - Karwar latest News

ಕಾಂಗ್ರೆಸ್ ಶಾಸಕರನ್ನು ಕರೆದುಕೊಳ್ಳುವ ಮೊದಲೇ ಹಿರಿಯ ರಾಜಕೀಯ ನಾಯಕರಿಗೆ ಅರಿವಿರಬೇಕಿತ್ತು ಎಂದು ಮಾಜಿ ಸಚಿವ, ಹಾಲಿ ಶಾಸಕ ಆರ್.ವಿ. ದೇಶಪಾಂಡೆ, ಈಶ್ವರಪ್ಪಗೆ ಟಾಂಗ್ ನೀಡಿದ್ದಾರೆ.

ಈಶ್ವರಪ್ಪಗೆ ದೇಶಪಾಂಡೆ ಟಾಂಗ್
ಈಶ್ವರಪ್ಪಗೆ ದೇಶಪಾಂಡೆ ಟಾಂಗ್

By

Published : Jun 15, 2021, 7:40 PM IST

Updated : Jun 15, 2021, 9:49 PM IST

ಕಾರವಾರ:ಬಿಜೆಪಿಯಲ್ಲಿ ಎದ್ದಿರುವ ಗೊಂದಲದ ಬಗ್ಗೆ ಈಶ್ವರಪ್ಪಗೆ ಈಗ ಅರಿವಾಗುತ್ತಿರುವುದು ಆಶ್ಚರ್ಯ. ಕಾಂಗ್ರೆಸ್ ಶಾಸಕರನ್ನು ಕರೆದುಕೊಳ್ಳುವ ಮೊದಲೇ ಹಿರಿಯ ರಾಜಕೀಯ ನಾಯಕರಾದ ಅವರಿಗೆ ಅರಿವು ಇರಬೇಕಿತ್ತು ಎಂದು ಮಾಜಿ ಸಚಿವ, ಹಾಲಿ ಶಾಸಕ ಆರ್.ವಿ. ದೇಶಪಾಂಡೆ ಟಾಂಗ್ ನೀಡಿದ್ದಾರೆ.

ಪೂರ್ಣ ಬಹುಮತವಿಲ್ಲದ ಕಾರಣ ಮುಖ್ಯಮಂತ್ರಿ ಬದಲಾವಣೆ ವಿಚಾರ ಇದೀಗ ಗೊಂದಲಕ್ಕಿಡಾಗಿದೆ ಎಂಬ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರ ಹೇಳಿಕೆಗೆ ಹಳಿಯಾಳದಲ್ಲಿ ಪ್ರತಿಕ್ರಿಯಿಸಿದರು.

ಹಿಸ್ಟರಿ ರಿಪೀಟ್ ಆಗಿದೆ. ಪಶ್ಚಿಮ ಬಂಗಾಳದಲ್ಲಿಯೂ ಇದೇ ಸ್ಥಿತಿ ನಿರ್ಮಾಣವಾಗಿತ್ತು. ಬಿಜೆಪಿ ವಿಚಾರಧಾರೆ ಒಂದಿರುವಾಗ ನಮ್ಮಲ್ಲಿಂದ ಹೋಗಿರುವವರ ವಿಚಾರಧಾರೆ ಇನ್ನೊಂದಿದೆ. ಇದೀಗ ಇಬ್ಬರ ಹೋಂದಾಣಿಕೆ ಸಾಧ್ಯವಿಲ್ಲ. ನಾನು 1983 ರಿಂದ ಆಡಳಿತ ಹಾಗೂ ವಿರೋಧ ಪಕ್ಷದಲ್ಲಿದ್ದಾಗ ಇದೆಲ್ಲವನ್ನು ನೋಡುತ್ತಿದ್ದೇನೆ. ಪಕ್ಷಾಂತರವಾದಾಗ ಏನೇನು ದುಷ್ಪರಿಣಾಮವಾಗುತ್ತಿದೆ ಎಂಬುದು ಗೊತ್ತಿದೆ ಎಂದರು.

ಈಶ್ವರಪ್ಪಗೆ ದೇಶಪಾಂಡೆ ಟಾಂಗ್

ಇದೀಗ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಏನಾಗಿದೆ ಅಂದ್ರೆ ಇತ್ತ ಜೊತೆಗೆ ಇದ್ದವರು ಅವರ ಹಾದಿ, ಸಂಸ್ಕೃತಿ ಬಿಡುತ್ತಿಲ್ಲ. ಕಾಂಗ್ರೆಸ್​ನಿಂದ ಬಂದವರಿಗೆ ಅಧಿಕಾರ ಸಿಗುತ್ತಿಲ್ಲ. ಅವರವರ ಕೆಲಸಗಳೂ ಆಗುತ್ತಿಲ್ಲ. ಬಿಜೆಪಿಯಿಂದ ನೂರಕ್ಕೂ ಹೆಚ್ಚು ಜನರು ಆಯ್ಕೆಯಾಗಿದ್ದರೂ ಸಹ ಮಂತ್ರಿಯಾದವರು 10-12 ಜನ ಮಾತ್ರ. ಇದು ಬಹಳ ಜನರಿಗೆ ನೋವಾಗಿದೆ. ನೂರಾರು ಜನ ಬಂದರೂ ಪ್ರಾಧಾನ್ಯತೆ ಇಲ್ಲದಂತಾಗಿದೆ. ಇದರ ಮುಂದಾಲೋಚನೆಯನ್ನು ಬಿಜೆಪಿ ಹೈಕಮಾಂಡ್ ಶಾಸಕರನ್ನು ಸೇರಿಸಿಕೊಳ್ಳುವ ಮೊದಲೆ‌ ಮಾಡಬೇಕಿತ್ತು.

ಸರ್ಕಾರ ಮಾಡ್ಕೊಂಡು ಹೋಗಿ ಎಂದು ನಮಗೆ ಹೇಳಬೇಕಿತ್ತು. ಅದನ್ನು ಬಿಟ್ಟು ಈ ರಿತಿ ಮಾಡಿಕೊಂಡಿದ್ದರಿಂದ ಈ ರೀತಿ ಗೊಂದಲವಾಗಿದೆ. ಆತ್ಮವಿಶ್ವಾಸ ಕಡಿಮೆಯಾಗಿರುವ ಕಾರಣ ಮುಖ್ಯಮಂತ್ರಿ ಇನ್ನು ಎರಡು ವರ್ಷ ತಾವೇ ಸಿಎಂ ಆಗಿರುವುದಾಗಿ ಹೇಳುತ್ತಿದ್ದಾರೆ.

ಇದರ ಪರಿಣಾಮ ಜನಸಾಮಾನ್ಯರ ಮೇಲೆ ಬೀರುತ್ತಿದೆ. ಸರ್ಕಾರದಲ್ಲಿ ಯಾರು ಯಾರ ಮಾತನ್ನು ಕೇಳುತ್ತಿಲ್ಲ. ಭ್ರಷ್ಟಾಚಾರ ಹೆಚ್ಚಾಗಿದೆ. ಇಂತಹ ಪರಿಸ್ಥಿತಿ ಬಗ್ಗೆ ಈಶ್ವರಪ್ಪನವರಿಗೆ ಮೊದಲೇ ಗೊತ್ತಿತ್ತು. ಆದರೂ ಅವರು ವಿರೋಧ ಮಾಡಿಲ್ಲ. ಇದರಲ್ಲಿ ಅವರದ್ದೂ ತಪ್ಪಿದೆ ಎಂದು ದೇಶಪಾಂಡೆ ಹೇಳಿದ್ದಾರೆ.

Last Updated : Jun 15, 2021, 9:49 PM IST

ABOUT THE AUTHOR

...view details