ಹಾಸನ: ಪ್ರಜ್ವಲ್ ಗೆಲ್ಲಿಸಿದರೆ ದುರಹಂಕಾರ ಹೆಚ್ಚಾಗುತ್ತದೆ, ಅವರ ಜೊತೆ ಇದ್ದು ಬಿಜೆಪಿಗೆ ಮತ ಹಾಕಿಸಿ ಗೆಲ್ಲಿಸುವ ಮೂಲಕ ತಮ್ಮ ಕುಟುಂಬದಲ್ಲಿ ಯಾರೆ ಚುನಾವಣೆಗೆ ನಿಂತರೂ ಗೆಲ್ಲುತ್ತೇವೆ ಎನ್ನುವ ಭ್ರಮೆಯಲ್ಲಿರುವ ಗೌಡರ ಕುಟುಂಬಕ್ಕೆ ಸೋಲಿನ ಭಯ ತೋರಿಸಿ ಎಂದು ಪ್ರೀತಂ ಗೌಡ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.
ಪ್ರಜ್ವಲ್ರನ್ನು ಸೋಲಿಸಲು ಕೈ ಕಾರ್ಯಕರ್ತರೊಂದಿಗೆ ಪ್ರೀತಂ ಗೌಡ ಸೀಕ್ರೆಟ್ ಪ್ಲಾನ್... ವಿಡಿಯೋ ವೈರಲ್ - lok sabha
ಬಿಜೆಪಿ ಶಾಸಕ ಪ್ರೀತಂಗೌಡ ಪ್ರಜ್ವಲ್ ರೇವಣ್ಣರನ್ನು ಸೋಲಿಸಲು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡ, ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಇನ್ನೂ ಹುಡುಗ. ಈಗಲೇ ಗೆಲ್ಲಿಸಿದರೆ ಅವನಿಗೆ ದುರಹಂಕಾರ ಬರುತ್ತದೆ.ಮುಂದೆ ಯಾರನ್ನೂ ಸರಿಯಾಗಿ ಮಾತನಾಡಿಸುವುದಿಲ್ಲ,ಈ ಚುನಾವಣೆಯಲ್ಲಿ ಅವನನ್ನು ಸೋಲಿsಉವ ಮೂಲಕ ಅವರಿಗೆ ಭಯ ಹುಟ್ಟಿಸಿದರೆ ಮಾತ್ರ ನಿಮಗೆ ಗೌರವ ಬರುತ್ತದೆ.
ಈ ಚುನಾವಣೆಯಲ್ಲಿ ಬೂತ್ ಮಟ್ಟದಲ್ಲಿ ಒಂದು ಲಕ್ಷ ನೀಡಿದ್ದಾರೆ, ಈ ಬಾರಿ ಸೋತರೆ ಮುಂದಿನ ಚುನಾವಣೆಯಲ್ಲಿ 5 ಲಕ್ಷ ಕೊಡುತ್ತಾರೆ, ಸೋತಾಗಲೆ ಕಾರ್ಯಕರ್ತರೊಂದಿಗೆ ಚೆನ್ನಾಗಿ ಮಾತನಾಡುತ್ತಾರೆ. ಇನ್ನು ನಿಮ್ಮ ಜೊತೆಯಲ್ಲಿರುವ ಜೆಡಿಎಸ್ ಕಾರ್ಯಕರ್ತರನ್ನು ಪ್ರಜ್ವಲ್ ಸೋಲಿಸುವಂತೆ ಹೇಳಿ, ಇದು ಮೋದಿ ಎಲೆಕ್ಷನ್ ಎಂದು ತಿಳಿಸಿ. ಪ್ರಜ್ವಲ್ ಕಾರ್ಯಕರ್ತರು ಹಾಗೂ ಮುಖಂಡರನ್ನು ಏಕವಚನದಲ್ಲಿ ಮಾತನಾಡಿಸುತ್ತಾನೆ. ಕಾರ್ಯಕರ್ತರಿಗೆ ಬೆಲೆ ಕೊಡಲ್ಲ. ಜೆಡಿಎಸ್ ಕಾರ್ಯಕರ್ತರಿಗೆ ಕೆಲಸ ಸಿಗಬೇಕಾದರೆ, ಗೌರವ ದೊರೆಯಬೇಕಾದರೆ ಅವನನ್ನು ಸೋಲಿಸಬೇಕಿದೆ. ಈ ಚುನಾವಣೆಯಲ್ಲೂ ಅವರೇ ಗೆದ್ದರೆ ಕಾರ್ಯಕರ್ತರ ಕಥೆ ಮುಗೀತು, ಎನ್ನುವ ಮೂಲಕ ಕಾಂಗ್ರೆಸ್ ಜೊತೆಯಲ್ಲಿರುವ ಜೆಡಿಎಸ್ ಕಾರ್ಯಕರ್ತರನ್ನು ಸೆಳೆಯವುದು ಹೇಗೆ ಎಂಬುದನ್ನ ಶಾಸಕ ಪ್ರೀತಂ ಗೌಡ ಪಾಠ ಹೇಳಿಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.