ಮೈಸೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರಿಗೆ ಕಿವಿ ಕೇಳಿಸಲ್ಲ, ಕಣ್ಣು ಕಾಣಿಸಲ್ಲ ಎಂದು ಹೇಳಿಕೆ ನೀಡಿರುವ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥರಿಗೆ ಶಾಸಕ ಎಲ್. ನಾಗೇಂದ್ರ ವಾರ್ನಿಂಗ್ ಮಾಡಿದ್ದಾರೆ.
ಪಕ್ಷದ ಶಿಸ್ತಿಗೆ ಬದ್ಧರಾಗಿರಿ.. ವಿಶ್ವನಾಥ್ಗೆ ಶಾಸಕ ನಾಗೇಂದ್ರ ವಾರ್ನಿಂಗ್ - Mysore news
ಎಂತೆಂಥ ನಾಯಕರ ವಿರುದ್ಧ ಪಕ್ಷ ಕ್ರಮ ಕೈಗೊಂಡಿದೆ. ವಿಶ್ವನಾಥ್ ವಿರುದ್ಧ ಕ್ರಮ ತೆಗೆದುಕೊಳ್ಳುವುದು ದೊಡ್ಡ ವಿಷಯವೇನಲ್ಲ. ಇದು ಕಾಂಗ್ರೆಸ್ ಸಿದ್ಧಾಂತದ ಪಕ್ಷವಲ್ಲ, ಬಿಜೆಪಿ ಶಿಸ್ತಿಗೆ ಬದ್ಧವಾಗಿರುವ ಪಕ್ಷ.
ಸರ್ಕಾರಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಶ್ವನಾಥ್ ಅವರು ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿ ನಡೆಯಬೇಕು. ಮುಖ್ಯಮಂತ್ರಿ ಹಾಗೂ ಪಕ್ಷದ ವಿರುದ್ಧ ಮಾತನಾಡಿದರೆ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತೆ ಎಂದಿದ್ದಾರೆ.
ಎಂತೆಂಥ ನಾಯಕರ ವಿರುದ್ಧ ಪಕ್ಷ ಕ್ರಮ ಕೈಗೊಂಡಿದೆ. ವಿಶ್ವನಾಥ್ ವಿರುದ್ಧ ಕ್ರಮ ತೆಗೆದುಕೊಳ್ಳುವುದು ದೊಡ್ಡ ವಿಷಯವೇನಲ್ಲ. ಇದು ಕಾಂಗ್ರೆಸ್ ಸಿದ್ಧಾಂತದ ಪಕ್ಷವಲ್ಲ, ಬಿಜೆಪಿ ಶಿಸ್ತಿಗೆ ಬದ್ಧವಾಗಿರುವ ಪಕ್ಷ. ಇದನ್ನು ಅರಿತು ಮುಂದಿನ ದಿನಗಳಲ್ಲಿ ವಿಶ್ವನಾಥ್ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಹೇಳಿದ್ದಾರೆ.