ಕರ್ನಾಟಕ

karnataka

ETV Bharat / briefs

ಕೈ ಮುಗಿದು ಕೇಳಿಕೊಳ್ಳುತ್ತೇನೆ.. ಪಾಸಿಟಿವ್ ಬಂದವರು ಕೋವಿಡ್ ಸೆಂಟರ್​ಗೆ ಸೇರಿಕೊಳ್ಳಿ: ಎನ್‌‌. ಮಹೇಶ್ - ಶಾಸಕ ಎನ್. ಮಹೇಶ್ ಮನವಿ

ನಿಮ್ಮಿಂದ ನಿಮ್ಮ ಊರಿಗೆ, ನಿಮ್ಮ ಕುಟುಂಬದವರಿಗೆ ಕೊರೊನಾ ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ನಿಮಗೆ‌ ಕೈಮುಗಿದು ಕೇಳುತ್ತಿದ್ದೇನೆ. ತಿಮ್ಮರಾಜೀಪುರ ಕೋವಿಡ್ ಸೆಂಟರ್​ಗೆ ಸೇರಿಕೊಳ್ಳಿ‌

N Mahesh
N Mahesh

By

Published : May 13, 2021, 3:27 PM IST

Updated : May 13, 2021, 6:34 PM IST

ಕೊಳ್ಳೇಗಾಲ(ಚಾಮರಾಜನಗರ):ಸಾರ್ವಜನಿಕರಲ್ಲಿ ಕೈ ಮುಗಿದು ಕೇಳಿಕೊಳುತ್ತೇನೆ ದಯವಿಟ್ಟು‌ ಕೊರೊನಾ ಪಾಸಿಟಿವ್ ಬಂದವರು ಕೋವಿಡ್ ಕೇರ್ ಸೆಂಟರ್​ಗೆ ಸೇರಿಕೊಳ್ಳಿ ಎಂದು ಶಾಸಕ ಎನ್. ಮಹೇಶ್ ಮನವಿ ಮಾಡಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಕೊರೊನಾ ವ್ಯಾಪಾಕವಾಗಿ ಹರಡುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಟಾಸ್ಕ್ ಪೋರ್ಸ್ ಸಭೆಯಲ್ಲಿ 1 ಗಂಟೆಗೂ ಹೆಚ್ಚು ಸಮಯ ಸಭೆ ನಡೆಸಿದ ಬಳಿಕ‌ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನೇ ದಿನೆ ಕೊರೊನಾ ಪ್ರಕರಣ ಹೆಚ್ಚಾಗುತ್ತಿದೆ. ಪ್ರಸ್ತುತ ಕೊಳ್ಳೇಗಾಲ ಟೌನ್ ಹಾಗೂ ಗ್ರಾಮಾಂತರ ಪ್ರದೇಶದ ಸೇರಿದಂತೆ 1,054 ಸಕ್ರಿಯ ಪ್ರಕರಣಗಳು ಇದೆ ಎಂದರು.

ದಯಮಾಡಿ ಕೊರೊನಾ ಪಾಸಿಟಿವ್ ಬಂದವರು ಕೋವಿಡ್ ಕೇರ್ ಸೆಂಟರ್​ಗೆ ಸೇರಿಕೊಳ್ಳಿ, ಉತ್ತಮ ಊಟ, ವಸತಿ ಹಾಗೂ ಔಷಧೋಪಚಾರ ಸಿಗುತ್ತೆ. ಸದ್ಯ ಸೆಂಟರ್​ನಲ್ಲಿ‌ 50 ಮಂದಿ‌ ಇದ್ದಾರೆ ಅಷ್ಟೆ. ನಿಮ್ಮಿಂದ ನಿಮ್ಮ ಊರಿಗೆ, ನಿಮ್ಮ ಕುಟುಂಬದವರಿಗೆ ಕೊರೊನಾ ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ನಿಮಗೆ‌ ಕೈಮುಗಿದು ಕೇಳ್ತಾ ಇದ್ದೀನಿ. ತಿಮ್ಮರಾಜೀಪುರ ಕೋವಿಡ್ ಸೆಂಟರ್​ಗೆ ಸೇರಿಕೊಳ್ಳಿ‌ ಅಂತ‌ ಮನವಿ‌ ಮಾಡಿದ್ದಾರೆ.

ಪಾಸಿಟಿವ್ ಬಂದವರು ಕೋವಿಡ್ ಸೆಂಟರ್​ಗೆ ಸೇರಿಕೊಳ್ಳಿ: ಎನ್‌‌. ಮಹೇಶ್

ಅಧಿಕಾರಿಗಳ ವಿರುದ್ಧ ಗಲಾಟೆ :

ಕುಣಗಳ್ಳಿ ಗ್ರಾಮದಲ್ಲಿ 10 ಮಂದಿಗೆ ಪಾಸಿಟಿವ್ ಆಗಿತ್ತು. ಅಧಿಕಾರಿಗಳು, ಬನ್ನಿ ಕೋವಿಡ್ ಕೇರ್ ಸೆಂಟರ್​ಗೆ ಎಂದು ಮನವಿ ಮಾಡಿದ್ದಾರೆ. ಆದರೆ, ಅವರ ವಿರುದ್ಧವೇ ಗಲಾಟೆ‌ ಮಾಡಿದ್ದಾರೆ. 10 ಮಂದಿ ಪೈಕಿ ಇಬ್ಬರು ಮಾತ್ರ ಕೋವಿಡ್ ಕೇರ್ ಸೆಂಟರ್ ಸೇರಿಕೊಂಡಿದ್ದಾರೆ. ಆದ್ದರಿಂದ ಇಂತಹ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಚುನಾಯಿತ ಸದಸ್ಯರು ಹಾಗೂ ಸಂಘ ಸಂಸ್ಥೆಗಳಿಗೆ ಕೇಳಿ ಕೊಳ್ಳುತ್ತೇನೆ. ಸೋಂಕಿತರ ಮನವೊಲಿಸಿ ಕೋವಿಡ್ ಸೇಂಟರ್​​​​​ಗೆ ಸೇರಿಸಿ. ಇಷ್ಟಾದರೆ ಒಂದು‌ ವಾರದಲ್ಲಿ ಕೋವಿಡ್ ಚೈನ್ ಲಿಂಕ್ ಅನ್ನು ಕಟ್ ಮಾಡಬಹುದಾಗಿದೆ. ಸೋಕಿಂತರ ಸಂಖ್ಯೆಯಲ್ಲಿ ಇಳಿಮುಖ‌ ಕಾಣಬಹುದಾಗಿದೆ ಎಂದರು.

Last Updated : May 13, 2021, 6:34 PM IST

ABOUT THE AUTHOR

...view details