ಕರ್ನಾಟಕ

karnataka

ETV Bharat / briefs

ಕೋವಿಡ್​ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ - ಬೆಳಗಾವಿ ಕೋವಿಡ್ ನಿರ್ವಹಣೆ

ಕೋವಿಡ್​ ನಿರ್ವಹಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿವೆ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದರು.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್
ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

By

Published : May 30, 2021, 2:55 PM IST

Updated : May 30, 2021, 5:34 PM IST

ಬೆಳಗಾವಿ:ಬೆಡ್​ಗೆ ಒಬ್ಬ ಮಂತ್ರಿ, ಆಕ್ಸಿಜನ್‌ಗೆ ಒಬ್ಬ ಮಂತ್ರಿ, ಸ್ಮಶಾನಕ್ಕೆ ಒಬ್ಬ ಮಂತ್ರಿ ಮಾಡಿದರೂ ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ‌ ಮತ್ತು ರಾಜ್ಯ ಸರ್ಕಾರ ಎರಡೂ ವಿಫಲವಾಗಿವೆ ಎಂದು‌ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯಲ್ಲಿ ನಿತ್ಯ 7 ಸಾವಿರ ಟೆಸ್ಟಿಂಗ್ ಮಾಡಿಸಿ ಅಂತಾ ಸರ್ಕಾರ ಹೇಳಿದೆ. ಆದರೆ ಬೆಳಗಾವಿಯಲ್ಲಿ ವೈದ್ಯರೇ ಇಲ್ಲ. ಪ್ರಾಥಮಿಕ ಆಸ್ಪತ್ರೆಗಳು ಸೋರುತ್ತಿವೆ. ಪ್ರಾಣ ಉಳಿಸಿಕೊಳ್ಳಲು ಗ್ರಾಮೀಣ ಪ್ರದೇಶದ ಜನರು ಸಾಲ ಮಾಡಿ‌ ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್
ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅಪ್‌ಗ್ರೇಡ್ ಮಾಡಿ ಅಂತಾ ಐದು ಬಾರಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದೇನೆ. ಆದ್ರೆ, ಈವರೆಗೂ ಯಾವುದೇ ರೀತಿಯಲ್ಲೂ ಪರಿಹಾರ ಸಿಕ್ಕಿಲ್ಲ. ಇತ್ತ ಆಸ್ಪತ್ರೆಗಳಲ್ಲಿ ವೈದ್ಯರು, ಟೆಕ್ನಿಷಿಯನ್ಸ್​ಗಳ ಕೊರತೆ ಹಾಗೂ ವೆಂಟಿಲೇಟರ್‌ಗಳು ಖಾಲಿ ಇದ್ದು ಪರಿಹಾರಕ್ಕೆ ಮುಂದಾಗದಿರುವ ರಾಜ್ಯ ಸರ್ಕಾರ, ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಈ ಬಗ್ಗೆ ಕಾಂಗ್ರೆಸ್​ನವರು ಮಾತಾಡಿದ್ರೆ ರಾಜಕಾರಣ‌ ಮಾಡ್ತಾರೆ ಎಂಬ ಆರೋಪವನ್ನು ‌ನಮ್ಮ ಮೇಲೆಯೇ‌ ಮಾಡ್ತಾರೆ. ಒಟ್ಟಾರೆ ಕೋವಿಡ್ ಎರಡನೇ ಅಲೆ ತಡೆಯಲು ರಾಜ್ಯ ಸರ್ಕಾರ ಯಾವುದೇ ರೀತಿಯ ತಯಾರಿ ಮಾಡಿಕೊಳ್ಳಲಿಲ್ಲ ಎಂದು ಆರೋಪಿಸಿದರು.ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಅವರ ಪಕ್ಷದ ಆಂತರಿಕ ವಿಚಾರವಾಗಿದ್ದು, ಆ ಬಗ್ಗೆ ನಾನು ಏನೂ ಮಾತನಾಡಲ್ಲ. ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಡಲು ಕಾಂಗ್ರೆಸ್ ಮೇಲೆ ಆರೋಪ ಮಾಡ್ತಿದೆ ಎಂದು ಹೇಳಿದರು.
Last Updated : May 30, 2021, 5:34 PM IST

ABOUT THE AUTHOR

...view details