ಮಂಡ್ಯ:ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ವಾಸವಾಗಿರುವ ಪ್ರಾಣಿಗಳ ಹಸಿವು ನೀಗಿಸುವುದಕ್ಕೆ ಶಾಸಕ ಡಾ.ಕೆ. ಅನ್ನದಾನಿ ಅವರು ಬಿಸ್ಕತ್ತು. ಪುರಿ ಮತ್ತು ಹಣ್ಣು ಹಂಪಲುಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ಮುತ್ತತ್ತಿ ಅರಣ್ಯ ಪ್ರದೇಶದ ಪ್ರಾಣಿಗಳಿಗೆ ಆಹಾರ ನೀಡಿ ಮಾನವೀಯತೆ ಮೆರೆದ ಶಾಸಕ ಅನ್ನದಾನಿ - ಮಂಡ್ಯ ಸುದ್ದಿ
ಮುತ್ತತ್ತಿ ಅರಣ್ಯ ಪ್ರದೇಶದಲ್ಲಿ ವಾಸವಾಗಿರುವ ಪ್ರಾಣಿಗಳಿಗೆ ಶಾಸಕ ಡಾ.ಕೆ. ಅನ್ನದಾನಿ ಆಹಾರ ನೀಡಿ ಅವುಗಳ ಹಸಿವು ನೀಗಿಸಿದ್ದಾರೆ.
ದೇಶವ್ಯಾಪ್ತಿ ಕೊರೊನಾ ವೈರಸ್ ಎರಡನೇ ಅಲೆ ಬಂದಾಗಿನಿಂದ ರಾಜ್ಯದಲ್ಲಿ ಜನ ಸಾಮಾನ್ಯರು ಭಾರಿ ತೊಂದರೆ ಅನುಭವಿಸಿದ್ದಾರೆ. ಮುತ್ತತ್ತಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಮುತ್ತತ್ತಿರಾಯನ ದರ್ಶನಕ್ಕೆ ಅಪಾರ ಭಕ್ತಾದಿಗಳು ಬರುವ ಸಂದರ್ಭದಲ್ಲಿ ಕಾಡಿನ ಒಳಗೆ ವಾಸವಾಗಿರುವ ಕಾಡು ಪ್ರಾಣಿಗಳಿಗೆ ಹಣ್ಣು - ಹಂಪಲುಗಳನ್ನು ನೀಡುತ್ತಿದ್ದರು. ಆ ಪ್ರಾಣಿಗಳು ಅವರು ನೀಡುವ ಆಹಾರ ಪದಾರ್ಥಗಳನ್ನು ಸೇವಿಸಿ ತಮ್ಮ ಹಸಿವುಗಳನ್ನು ನೀಗಿಸಿಕೊಳ್ಳುತ್ತಿದ್ದವು. ಆದರೆ, ಈಗ ಲಾಕ್‌ಡೌನ್ ಕಾರಣದಿಂದ ಮುತ್ತತ್ತಿಗೆ ಹೋಗುವ ಭಕ್ತಾದಿಗಳಿಲ್ಲದೇ ಕಾಡು ಪ್ರಾಣಿಗಳಿಗೆ ಆಹಾರದ ಕೊರತೆ ಎದುರಾಗಿದೆ. ಈ ವಿಷಯ ತಿಳಿದು ಹಣ್ಣು ಹಂಪಲುಗಳನ್ನು ನೀಡಿದ್ದೇನೆ ಎಂದರು.
ಕೊರೊನಾ ಮೊದಲ ಅಲೆಯಲ್ಲೂ ಸಹ ಕಾಡುಪ್ರಾಣಿಗಳಿಗೆ ಇದೇ ರೀತಿ ಆಹಾರ ಪದಾರ್ಥಗಳನ್ನು ನೀಡಿದ್ದೆ. ಅರಣ್ಯ ಪ್ರದೇಶದಲ್ಲಿ ಕಾರು ನಿಲ್ಲಿಸಿದ ತಕ್ಷಣವೇ ನಮಗೆ ಹಣ್ಣು ಹಂಪಲ ನೀಡುತ್ತಾರೆ ಎಂದು ಕೋತಿಗಳು ಗುಂಪು ಗುಂಪಾಗಿ ಓಡಿ ಬಂದ ದೃಶ್ಯ ನನ್ನ ಮನಕಲಕಿತ್ತು. ಬಾಳೆಗೊನೆಯನ್ನು ತೆಗೆದುಕೊಂಡು ಹೋದ ತಕ್ಷಣ ಎಲ್ಲ ಕೋತಿಗಳು ಬಂದು ಬಾಳೆಯನ್ನು ಕಿತ್ತುಕೊಂಡು ಓಡಿ ಹೋಗುತ್ತಿದ್ದವು. ಈ ಬಾರಿಯೂ ಸಹ ಪ್ರಾಣಿಗಳಿಗೆ ಹಸಿವು ನೀಗಿಸುವ ಕಾರ್ಯ ಮಾಡುತ್ತಿದ್ದೇನೆ ಎಂದರು.