ತುಮಕೂರು: ನಗರದ ಪಾಲಿಕೆಗೆ ಶಕ್ತಿ ಕೇಂದ್ರ ಎನಿಸಿರುವ ಮಿನಿ ವಿಧಾನಸೌಧದಲ್ಲೇ ಸ್ವಚ್ಛತೆ ಎಂಬುದು ಮರೀಚಿಕೆ ಆಗಿದೆ. ಸಿಗರೇಟ್ ಪ್ಯಾಕ್, ಕುಡಿದು ಬಿಸಾಡಿರುವ ಮದ್ಯದ ಬಾಟಲಿಗಳಿಂದ ಮಿನಿ ವಿಧಾನಸೌಧ ನೋಡಿದರೆ ಮೂಗು ಮುರಿಯುವಂತಾಗಿದೆ.
ಇನ್ನೂ ಆಶ್ವರ್ಯದ ಸಂಗತಿ ಎಂದರೆ, ಇದೇ ಕಟ್ಟಡದಲ್ಲಿಯೇ ಜಿಲ್ಲಾಧಿಕಾರಿ ಕಚೇರಿ, ಅಪರ ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ್ ಕಚೇರಿ, ಎಸಿ ಕಚೇರಿಗಳಿವೆ. ಇವುಗಳು ಹೇಗೆ ಬಂದವು? ಯಾರು ಇಲ್ಲಿ ಹಾಕಿದವರು? ಇದೆಲ್ಲವೂ ಅಧಿಕಾರಿಗಳ ಗಮನಕ್ಕೆ ಇದೆಯೇ ಎಂಬ ಹಲವು ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡುತ್ತಿವೆ.