ಬೀದರ್:ಕೋವಿಡ್ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಕಠಿಣ ಲಾಕ್ಡೌನ್ನಿಂದಾಗಿ ಸಂಕಷ್ಟದಲ್ಲಿರುವ ನಿರ್ಗತಿಕ ಹಾಗೂ ಬಡ ಜನರಿಗಾಗಿ ನಿತ್ಯ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಚಾಲನೆ ನೀಡಿದರು.
ಕೊರೊನಾ ಸಂಕಷ್ಟ: ನಿರ್ಗತಿಕರಿಗಾಗಿ ಸಚಿವ ಪ್ರಭು ಚವ್ಹಾಣ್ರಿಂದ ನಿತ್ಯ ದಾಸೋಹ...! - ಕೊರೊನಾ ಸಂಕಷ್ಟ
ಔರಾದ್ ಪಟ್ಟಣದಲ್ಲಿ ಅನ್ನ ದಾಸೋಹ ಆರಂಭಿಸಿದ ಸಚಿವ ಚವ್ಹಾಣ್, ಸತತ ಲಾಕ್ಡೌನ್ ಜಾರಿಯಲ್ಲಿರುವವರೆಗೆ ತಿಂಡಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
Prabhu chawhan
ಜಿಲ್ಲೆಯ ಔರಾದ್ ಪಟ್ಟಣದಲ್ಲಿ ಅನ್ನ ದಾಸೋಹ ಆರಂಭಿಸಿ ಮಾತನಾಡಿದ ಅವರು, ಸತತ ಲಾಕ್ಡೌನ್ ಜಾರಿಯಲ್ಲಿರುವವರೆಗೆ ತಿಂಡಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಕಾರ್ಮಿಕರು, ಬಡವರು, ನಿರ್ಗತಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಣಾಮ ಅವರ ಹಸಿವು ನೀಗಿಸುವ ಕೆಲಸ ಮಾಡಲಾಗಿದೆ ಎಂದರು.
ಕಳೆದ ವರ್ಷ ಲಾಕ್ಡೌನ್ ಸಂದರ್ಭದಲ್ಲಿ ಸ್ವಂತ ಖರ್ಚಿನಲ್ಲಿ 45 ದಿನಗಳ ಕಾಲ ಊಟದ ವ್ಯವಸ್ಥೆ ಮಾಡಲಾಗಿತ್ತು. ಅದರಂತೆ ಈ ವರ್ಷವೂ ಔರಾದ್ ಹಾಗೂ ಕಮಲನಗರ ಸೇರಿದಂತೆ ಜಿಲ್ಲೆಯಾದ್ಯಂತ ವಿವಿಧ ಜನರ ತಂಡ ಮಾಡಿ ವ್ಯವಸ್ಥಿತವಾಗಿ ವಿವಿಧ ಭಾಗವಾರು ಅನ್ನ ದಾಸೋಹ ಸರಬರಾಜು ಮಾಡಲಾಗಿದೆ ಎಂದರು.
Last Updated : May 13, 2021, 8:44 PM IST