ಕರ್ನಾಟಕ

karnataka

ETV Bharat / briefs

ಅಗತ್ಯ ಇರುವಷ್ಟು ಬ್ಲ್ಯಾಕ್ ಫಂಗಸ್​ ಔಷಧ ಬಂದಿಲ್ಲ: ಸಚಿವ ಶೆಟ್ಟರ್ - Hubli Minister Jagadish shetter News

ಕಿಮ್ಸ್ ವೈದ್ಯರ ಪ್ರಕಾರ ಹುಬ್ಬಳ್ಳಿಗೆ 2 ಸಾವಿರ ವಯಲ್ಸ್ ಬೇಕು. ಆದರೆ ಸರ್ಕಾರ ನೀಡಿರುವುದು 100 ವಯಲ್ಸ್​. ಅಂಪೋಟೆರಿಸನ್-ಬಿ ಉತ್ಪಾದನೆಯಿಲ್ಲ. ಅಷ್ಟೊಂದು ಪ್ರಮಾಣದಲ್ಲಿ ಉತ್ಪಾದನೆ ಇಲ್ಲದೇ ಇರೋದು ಸಮಸ್ಯೆ ತಂದಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಸಚಿವ ಜಗದೀಶ್​ ಶೆಟ್ಟರ್​
ಸಚಿವ ಜಗದೀಶ್​ ಶೆಟ್ಟರ್​

By

Published : May 24, 2021, 4:20 PM IST

Updated : May 24, 2021, 8:25 PM IST

ಹುಬ್ಬಳ್ಳಿ: ಕಿಮ್ಸ್​ನಲ್ಲಿ 102 ಜನ ಬ್ಲ್ಯಾಕ್ ಫಂಗಸ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೆಲ್ಲರಿಗೆ ಚುಚ್ಚುಮದ್ದು ಅಗತ್ಯವಿದೆ. ಆದರೆ ಅಷ್ಟು ಉತ್ಪಾದನೆಯಾಗದೇ ಇರುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ಸರ್ಕಾರ ಕೇವಲ 100 ವಯಲ್ಸ್ ನೀಡಿದೆ. ಕಿಮ್ಸ್ ವೈದ್ಯರ ಪ್ರಕಾರ 2 ಸಾವಿರ ವಯಲ್ಸ್ ಬೇಕು. ಅಂಪೋಟೆರಿಸನ್-ಬಿ ಉತ್ಪಾದನೆಯಿಲ್ಲ. ಅಷ್ಟೊಂದು ಪ್ರಮಾಣದಲ್ಲಿ ಉತ್ಪಾದನೆ ಇಲ್ಲದೆ ಇರೋದು ಸಮಸ್ಯೆ ತಂದಿದೆ ಎಂದು ಶೆಟ್ಟರ್ ಹೇಳಿದರು.

ಅಗತ್ಯ ಇರುವಷ್ಟು ಬ್ಲ್ಯಾಕ್ ಫಂಗಸ್​ ಔಷಧ ಬಂದಿಲ್ಲ: ಸಚಿವ ಶೆಟ್ಟರ್

ಬಳ್ಳಾರಿಯ ಜಿಂದಾಲ್​ನಲ್ಲಿ ಆಕ್ಸಿಜನ್ ಉತ್ಪಾದನೆ ನಿಂತಿಲ್ಲ. ಹತ್ತು ದಿನಕೊಮ್ಮೆ ಅದನ್ನ ತಾಂತ್ರಿಕ ಕಾರಣದಿಂದ ಬಂದ್ ಮಾಡ್ತಾರೆ. ಇಂದು ಮಧ್ಯಾಹ್ನದಿಂದ ಮತ್ತೆ ಆರಂಭವಾಗಿದೆ. ನಾನು ಜಿಂದಾಲ್ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಯಾವುದೇ ತೊಂದರೆಯಾಗುತ್ತಿಲ್ಲ ಎಂದು ಹೇಳಿದ್ದಾರೆ. ನಮಗೆ ಎಷ್ಟು ಬೇಕು ಅಷ್ಟು ಆಕ್ಸಿಜನ್ ಸಿಗ್ತಿದೆ ಎಂದರು.

ಗೊಬ್ಬರದ ವಿತರಣೆಯನ್ನ ಆದಷ್ಟು ಬೇಗ ಮಾಡಲು ಕೃಷಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೀಜ ಹಂಚುವುದು, ಗೊಬ್ಬರ ಹಂಚುವುದು ಸ್ವಲ್ಪ ಸಮಸ್ಯೆಯಾಗಿದೆ. ಲಾಕ್​ಡೌನ್ ಆಗಿದೆ. ಹೀಗಾಗಿ ಬೀಜ ವಿತರಣೆಗೆ ತಾಲೂಕು ಕೇಂದ್ರಗಳನ್ನ ತೆರೆಯಲಾಗಿದೆ.

ಗೊಬ್ಬರದ ವಿತರಣೆಯ ಬಗ್ಗೆ ರೈತರ ಜೊತೆ, ವರ್ತಕರ ಜೊತೆ ಚರ್ಚೆ ಮಾಡಿದ್ದೇವೆ. ನಾಳೆಯಿಂದಲೇ ವಿತರಣೆಗೆ ಅವಕಾಶ ನೀಡಲಾಗುತ್ತದೆ. ಕೊರೊನಾ ಕಾಲದಲ್ಲಿ ಬೀಜ ವಿತರಣೆ ಸವಾಲಾಗುತ್ತದೆ. ಹೀಗಾಗಿ ಹೇಗೆ ನೀಡಬೇಕು ಎನ್ನುವ ನಿಟ್ಟಿನಲ್ಲಿ ಸಿದ್ಧತೆ ಮಾಡುತ್ತಿದ್ದೇವೆ. ರೈತರ ಕೃಷಿ ಚಟುವಟಿಕೆಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು.

Last Updated : May 24, 2021, 8:25 PM IST

ABOUT THE AUTHOR

...view details