ಕರ್ನಾಟಕ

karnataka

ETV Bharat / briefs

ಸೂಪರ್​ ಓವರ್​ನಲ್ಲಿ ಕಿಲ್ಲರ್​ ಆದ ಮಿಲ್ಲರ್​ ... ಲಂಕಾ ವಿರುದ್ಧ ಹರಿಣಗಳಿಗೆ 9 ರನ್​ಗಳ ರೋಚಕ ಜಯ - ರೋಚಕ ಜಯ

ಮಲಿಂಗಾ ಅದ್ಭುತ ದಾಳಿಯಿಂದ ಟೈ ಸಾಧಿಸಿದ್ದ ಲಂಕಾ ತಂಡ ಮಿಲ್ಲರ್​ ಬ್ಯಾಟಿಂಗ್,​ ತಾಹಿರ್​ ಬೌಲಿಂಗ್​ ನಲುಗಿ ಸೂಪರ್​ ಓವರ್​ನಲ್ಲಿ ಸೋಲನುಭವಿಸಿದೆ.

miller

By

Published : Mar 20, 2019, 11:39 AM IST

ಕೇಪ್​ಟೌನ್​: ಟೈನಲ್ಲಿ ಅಂತ್ಯಗೊಂಡಿದ್ದ ಮೊದಲ ಟಿ20 ಪಂದ್ಯದಲ್ಲಿ ದ.ಆಫ್ರಿಕಾ ತಂಡ ಲಂಕಾ ವಿರುದ್ಧ ಸೂಪರ್​ ಓವರ್​ನಲ್ಲಿ 9 ರನ್​ಗಳಿಂದ ರೋಚಕ ಜಯ ಸಾಧಿಸಿದೆ.

ಟಾಸ್​ ಸೋತ ಲಂಕಾ ಮೊದಲು ಬ್ಯಾಟಿಂಗ್​ ನಡೆಸಿ 20 ಓವರ್​ಗಳಲ್ಲಿ ಕೇವಲ 134 ರನ್​ಗಳನ್ನು ಕಲೆ ಹಾಕಿತು. ಕಮಿಂಡು ಮೆಂಡಿಸ್​ 41 ರನ್​ಗಳಿಸಿ ಲಂಕಾ ಪರ ಗರಿಷ್ಠ ಸ್ಕೋರ್​ ಎನಿಸಿದರು. ಆಫ್ರಿಕಾ ಪರ ಪೆಹ್ಲುಕ್ವಾಯೋ 3, ತಾಹಿರ್​, ರಬಡಾ, ಸ್ಟೈನ್​, ಲುಥೋ ಸಿಂಪಾಲಾ ತಲಾ ಒಂದು ವಿಕೆಟ್​ ಪಡೆದು ಲಂಕಾ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದರು.

135 ರನ್​ಗಳ ಗುರಿ ಪಡೆದ ಆಫ್ರಿಕಾ ತಂಡ ಮೊದಲ 10 ಓವರ್​ಗಳಲ್ಲಿ ಡಿ ಕಾಕ್​ 13, ರೀಝಾ ಹೆನ್ರಿಕ್ಸ್​(08), ಡು ಪ್ಲೆಸಿಸ್​ (21) ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಈ ಹಂತದಲ್ಲಿ ಜೊತೆಗೂಡಿದ ಮಿಲ್ಲರ್​ (41) ಹಾಗೂ ವಾನ್​ ಡರ್​ ಡಾಸೆನ್​(34) 66 ರನ್​ಗಳ ಜೊತೆಯಾಟ ನೀಡಿ ತಂಡವನ್ನು ಗೆಲುವಿನ ಸನಿಹ ತಂದರು.

ಮಲಿಂಗಾ ಮ್ಯಾಜಿಕ್​:

ಗೆಲುವಿಗೆ 4 ಓವರ್​ಗಳಲ್ಲಿ 18 ರನ್​ಗಳ ಅಗತ್ಯವಿದ್ದಾಗ 17 ನೇ ಓವರ್​ ಎಸೆದ ಮಲಿಂಗಾ ಉತ್ತಮವಾಗಿ ಆಡುತ್ತಿದ್ದ ಡಾಸೆನ್​ ವಿಕೆಟ್​ ಕಬಳಿಸಿದರು. ನಂತರ ಅದೇ ಓವರ್​ನಲ್ಲಿ ಮಿಲ್ಲರ್​ ಕೂಡ ರನ್​ಔಟ್​ ಆದರು. ನಂತರದ ಓವರ್​ನಲ್ಲಿ 10 ರನ್​ ಬಂದಿತು. ಕೊನೆಗೆ 12 ಬಾಲಿಗೆ 6 ರನ್​ಗಳ ಅವಶ್ಯಕತೆ ಇದ್ದಾಗ 19 ನೇ ಓವರ್​ ಎಸೆದ ಮಲಿಂಗಾ ಕೇವಲ 1 ರನ್​ ನೀಡಿ ಒಂದು ವಿಕೆಟ್​ ಪಡೆದರು.

ಕೊನೆಯ ಓವರ್​ನಲ್ಲಿ ಎಡವಿದ ಆಫ್ರಿಕಾ:

ಕೊನೆಯ 6 ಬಾಲಿಗೆ ಕೇವಲ 5 ರನ್​ ಅಗತ್ಯವಿತ್ತು. ಇಸಿರು ಉದಾನ ಬೌಲಿಂಗ್​ನಲ್ಲಿ ಮೊದಲ ಎಸೆತದಲ್ಲಿ ಸಿಂಗಲ್​ ತೆಗೆದುಕೊಂಡ ಡುಮಿನಿ ಪ್ರಮಾದ ಎಸೆಗಿದರು. ನಂತರದ 3 ಎಸೆತಗಳಲ್ಲಿ ಡೇಲ್​ ಸ್ಟೈನ್​ ಕೇವಲ 1 ರನ್​ ತೆಗೆದುಕೊಂಡರು. ಕೊನೆಯ 2 ಎಸೆತಗಳಲ್ಲಿ 3 ರನ್​ಗಳ ಅಗತ್ಯವಿತ್ತು. 5ನೇ ಎಸೆತದಲ್ಲಿ ಕೇವಲ 1 ರನ್​ ತೆಗೆದ ಡುಮಿನಿ 2 ನೇ ರನ್​ಗಾಗಿ ಓಡುವಾಗ ರನ್​ಔಟ್​ ಆದರು. ಕೊನೆಯ ಎಸೆತದಲ್ಲಿ ತಾಹಿರ್​ ಒಂದು ರನ್​ ತೆಗೆದುಕೊಳ್ಳಲು ಯಶಸ್ವಿಯಾಗಿ ಪಂದ್ಯವನ್ನು ಟೈ ಮಾಡಿದರು.

ಸೂಪರ್​ ಓವರ್​ನಲ್ಲಿ ಮಿಂಚಿದ ಮಿಲ್ಲರ್- ತಾಹಿರ್​:

ಮಲಿಂಗಾ ಎಸೆದ ಸೂಪರ್​ ಓವರ್​ನಲ್ಲಿ ಮಿಲ್ಲರ್​ ತಲಾ ಒಂದು ಬೌಂಡರಿ-ಸಿಕ್ಸರ್​ ಸಿಡಿಸಿ​ ಲಂಕಾಗೆ 15 ರನ್​ಗಳ ಟಾರ್ಗೆಟ್​ ನೀಡಿದರು. 15 ರನ್​ ಬೆನ್ನತ್ತಿದ ಲಂಕಾ ತಾಹಿರ್​ ಸ್ಪಿನ್​ ಮೋಡಿ ಮುಂದೆ ಪರದಾಡಿ 5 ರನ್​ಗಳಿಸಲಷ್ಟೇ ಶಕ್ತವಾಯಿತು. ದ.ಆಫ್ರಿಕಾ ತಂಡ ಮಿಲ್ಲರ್​-ತಾಹಿರ್​ ನೆರವಿನಿಂದ 9 ರನ್​ಗಳಿಂದ ಜಯಬೇರಿ ಬಾರಿಸಿತು.

ABOUT THE AUTHOR

...view details