ಕರ್ನಾಟಕ

karnataka

ETV Bharat / briefs

ಮುಂಬೈ ವಿರುದ್ಧ 'ರಾಯಲ್​ ಚಾಲೆಂಜ್​'ಗೆ ಸಿದ್ದವಾದ ಕೊಹ್ಲಿಪಡೆ... ಮುಂಬೈನಲ್ಲಿ ಸಿಗುವುದೇ 2ನೇ ಜಯ!

ಮುಂಬೈ ವಿರುದ್ಧ ತವರಿನಲ್ಲಿ ನಡೆದ ಪಂದ್ಯದಲ್ಲಿ ಸೋಲನುಭವಿಸಿದ್ದ ಆರ್​ಸಿಬಿ ಇದೀಗ ಮುಂಬೈ ತವರಿಗೇ ಕಾಲಿಟ್ಟು ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

rcb

By

Published : Apr 15, 2019, 5:45 PM IST

ಮುಂಬೈ: ಮೂರು ಬಾರಿಯ ಚಾಂಪಿಯನ್​ ಮುಂಬೈ ಹಾಗೂ ಮೂರು ಬಾರಿಯ ರನ್ನರ್​ ಆಫ್​ ಆರ್​ಸಿಬಿ ಇಂದು ಮುಂಬೈನಲ್ಲಿ ಮುಖಾಮುಖಿಯಾಗಲಿದೆ.

ಸತತ 6 ಪಂದ್ಯಗಳ ಸೋಲಿನ ನಂತರ ಚೊಚ್ಚಲ ಗೆಲುವು ಸಾಧಿಸಿರುವ ಆರ್​ಸಿಬಿ ಪ್ಲೇ ಆಫ್​ ತಲುಪಬೇಕಾದರೆ ಮುಂದಿನ ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಇನ್ನು ಮುಂಬೈ 3 ಸೋಲು 4 ಗೆಲುವಿನೊಂದಿಗೆ ಆಂಕಪಟ್ಟಿಯಲ್ಲಿ 4 ನೇಸ್ಥಾನದಲ್ಲಿದೆ. ಈಗಾಗಲೆ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ 6 ರನ್​ಗಳಿಂದ ಆರ್​ಸಿಬಿಯನ್ನು ಮಣಿಸಿರುವ ರೋಹಿತ್​ ಪಡೆ ತವರಿನಲ್ಲಿ ಆರ್​ಸಿಬಿಗಿಂತ ಬಲಿಷ್ಠವಾಗಿದೆ.

ಆದರೆ, ಕಳೆದ ಪಂದ್ಯದಲ್ಲಿ ರಾಜಸ್ಥಾನದ ವಿರುದ್ಧ ರೋಚಕ ಸೋಲುಕಂಡಿರುವ ಮುಂಬೈ ತನ್ನ ತಪ್ಪು ತಿದ್ದುಕೊಂಡು ಈ ಪಂದ್ಯದಲ್ಲಿ ಗೆಲುವಿನ ಹಳಿಗೆ ಮರಳಲು ಕಾಯುತ್ತಿದೆ. ವಾಂಖೆಡೆಯಲ್ಲಿ ಚೇಸಿಂಗ್​ ನಡೆಸಲು ಉತ್ತಮ ಆಗಿರುವುದರಿಂದ ಟಾಸ್​ ಗೆದ್ದ ತಂಡ ಬೌಲಿಂಗ್​ ಆಯ್ದುಕೊಳ್ಳಿದೆ.

ಐಪಿಎಲ್​ ಮುಖಾಮುಖಿ:

ಆರ್​ಸಿಬಿ ಹಾಗೂ ಮುಂಬೈ ಇಂಡಿಯನ್ಸ್​ ಇದುವರೆಗೂ ಐಪಿಎಲ್​ನಲ್ಲಿ 26 ಪಂದ್ಯಗಳನ್ನಾಡಿದ್ದು ಮುಂಬೈ 17ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ಆರ್​ಸಿಬಿ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ವಾಂಖೆಡೆಯಲ್ಲಿ ನಡೆದಿರುವ 10 ಪಂದ್ಯಗಳಲ್ಲಿ ಮುಂಬೈ 6ರಲ್ಲಿ ಆರ್​ಸಿಬಿ 4ರಲ್ಲಿ ಜಯಸಿದೆ

ಸಂಭಾವ್ಯ ತಂಡ:

ರಾಯಲ್​ ಚಾಲೆಂಜರ್ಸ್​ ಬೆಂಗಳೂರು:

ವಿರಾಟ್​ ಕೊಹ್ಲಿ (ಕ್ಯಾಪ್ಟನ್​), ಪಾರ್ಥಿವ್​ ಪಟೇಲ್​, ಮೊಯಿನ್ ​ಅಲಿ, ಎಬಿಡಿ ವಿಲಿಯರ್ಸ್​, ಮಾರ್ಕಸ್​ ಸ್ಟೋಯ್ನಿಸ್​​​, ಪವನ್​ ನೇಗಿ, ಡೇಲ್​ ಸ್ಟೈನ್​​, ಉಮೇಶ್​ ಯಾದವ್, ಯಜುವೇಂದ್ರ ಚಹಲ್​, ಮೊಹಮ್ಮದ್​ ಸಿರಾಜ್​, ನವದೀಪ್​ ಸೈನಿ

ಮುಂಬೈ ಇಂಡಿಯನ್ಸ್​:

ರೋಹಿತ್‌ ಶರ್ಮಾ (ನಾಯಕ), ಕ್ವಿಂಟನ್‌ ಡಿ ಕಾಕ್‌, ಸೂರ್ಯಕುಮಾರ್‌ ಯಾದವ್​, ಇಶನ್​ ಕಿಶನ್​​, ಕೀರನ್​ ಪೊಲ್ಲಾರ್ಡ್‌, ಹಾರ್ದಿಕ್‌ ಪಾಂಡ್ಯ, ಕೃನಾಲ್‌ ಪಾಂಡ್ಯ, ಲಸಿತ್​ ಮಲಿಂಗಾ, ರಾಹುಲ್​ ಚಹಾರ್, ಬುಮ್ರಾ, ಬೆಹ್ರನ್​ಡ್ರಾಫ್​

ABOUT THE AUTHOR

...view details