ಬೆಂಗಳೂರು: ಮೆಟ್ರೋ ಕಾಮಗಾರಿ ವೇಳೆ ಅವಘಡ ಸಂಭವಿಸಿದ್ದು, ಬಿಎಂಆರ್ಸಿಎಲ್ ನಿರ್ಲಕ್ಷಕ್ಕೆ ಬಲಿಯಾಗುತ್ತಿದ್ದ ವೃದ್ಧರೊಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೆಟ್ರೋ ಕಾಮಗಾರಿ ವೇಳೆ ಅವಘಡ : ಪ್ರಾಣಾಪಾಯದಿಂದ ಪಾರಾದ ವೃದ್ಧ - undefined
ಕ್ರೈನ್ನಿಂದ ಕೆಲಸ ಮಾಡುವ ಸಮಯದಲ್ಲಿ ವಸ್ತುವೊಂದು ಮೇಲಿಂದ ಕೆಳಗೆ ಬಿದ್ದಿದೆ. ಪರಿಣಾಮ ಆಟೋದಲ್ಲಿ ಪ್ರಯಾಣಿಸುತ್ತಿದ್ದ 81 ವರ್ಷದ ವೃದ್ಧ ಆನಂದ್ ರಾವ್ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ.
![ಮೆಟ್ರೋ ಕಾಮಗಾರಿ ವೇಳೆ ಅವಘಡ : ಪ್ರಾಣಾಪಾಯದಿಂದ ಪಾರಾದ ವೃದ್ಧ](https://etvbharatimages.akamaized.net/etvbharat/prod-images/768-512-3356117-thumbnail-3x2-metro.jpg)
ಸೆಂಟರ್ ಸಿಲ್ಕ್ ಬೋರ್ಡ್ ನಿಂದ ಆರ್ವಿ ರೋಡ್ನ ರೀಚ್- 5 ರ ಕಾಮಗಾರಿ ನಡೆಯುತ್ತಿದೆ. ಈ ವೇಳೆ ಪಿಲ್ಲರ್ ಕಾಮಗಾರಿಗಾಗಿ ಕ್ರೈನ್ನಿಂದ ಕೆಲಸ ಮಾಡುವ ಸಮಯದಲ್ಲಿ ವಸ್ತುವೊಂದು ಮೇಲಿಂದ ಕೆಳಗೆ ಬಿದ್ದಿದೆ. ಪರಿಣಾಮ ಆಟೋದಲ್ಲಿ ಪ್ರಯಾಣಿಸುತ್ತಿದ್ದ 81 ವರ್ಷದ ವೃದ್ಧ ಆನಂದ್ ರಾವ್ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಆಟೋದಲ್ಲಿದ್ದ ಮತ್ತಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸದ್ಯ ವೃದ್ಧ ಆನಂದ್ ರಾವ್ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಬಿಎಂಆರ್ಸಿಎಲ್ ಪ್ರಕಟಣೆ ಹೊರಡಿಸಿದ್ದು ಆಕಸ್ಮಿಕವಾಗಿ ಈ ದುರ್ಘಟನೆ ನಡೆದಿದೆ ಎಂದು ತಿಳಿಸಿದೆ. ಆದರೆ, ಕಾಮಗಾರಿ ವೇಳೆ ವಹಿಸಬೇಕಾದ ಸುರಕ್ಷತೆ ಬಗ್ಗೆ ಬಿಎಂಆರ್ ಸಿಎಲ್ ಗಮನಹರಿಸಿದ್ದರೆ ಇಂತಹ ಅನಾಹುತ ಸಂಭವಿಸುತ್ತಿರಲಿಲ್ಲ.