ಕರ್ನಾಟಕ

karnataka

ETV Bharat / briefs

ಆನೆಯಂತೆ ಮದವೇರಿದ ಸಹೋದರ... ಕೊಡಲಿ ದಾಳಿಗೆ ಅಣ್ಣ, ಅತ್ತಿಗೆ ಮಕ್ಕಳೂ ಸೇರಿ ಐವರು ಬಲಿ! - ಐವರು ಬಲಿ

ರಾಂಚಿ: ಜಾರ್ಖಂಡ್​ನ ಸರೈಕೆಲಾ-ಖಾರ್ಸ್ವಾನ್​ ಜಿಲ್ಲೆಯಲ್ಲಿ ಮಾನಸಿಕ ಅಸ್ವಸ್ಥನಾಗಿದ್ದ ವ್ಯಕ್ತಿಯೊಬ್ಬ ತನ್ನ ಕುಟುಂಬದವರ ಮೇಲೆ ಕೊಡಲಿಯಿಂದ ದಾಳಿ ಮಾಡಿದ್ದು, ಇಬ್ಬರು ಮಕ್ಕಳು ಸೇರಿದಂತೆ ಐವರು ಸಾವಿಗೀಡಾಗಿದ್ದಾರೆ.

ಸಾವನ್ನಪ್ಪಿರುವ ಕುಟುಂಬಸ್ಥರ ದೃಶ್ಯ...

By

Published : Feb 24, 2019, 1:38 PM IST

ಆರೋಪಿ ಚುನು ಸೊರೆನ್​ ತನ್ನ ಹಿರಿಯ ಸಹೋದರ ರವಿ ಸೊರೆನ್ (45)​, ಅತ್ತಿಗೆ ಕಲ್ಪನಾ (39), ಅಳಿಯ ಜಿತ್ನಾ ಸೊರೆನ್​ ಮತ್ತು ಇಬ್ಬರು ಮಕ್ಕಳ ಮೇಲೆ ಕೊಡಲಿಯಿಂದ ದಾಳಿ ಮಾಡಿದ್ದಾನೆ. ಪರಿಣಾಮ ಐವರು ಸ್ಥಳದಲ್ಲೇ ಸಾವಿಗೀಡಾದರು.

ಇನ್ನು ಐವರನ್ನು ಕೊಲೆ ಮಾಡಿದ ಬಳಿಕ ತನ್ನ ಕಿರಿಯ ಸಹೋದರ ಮತ್ತು ತಾಯಿಯ ಮೇಲೆಯೂ ದಾಳಿ ಮಾಡಿದ್ದಾನೆ. ಆದರೆ, ಅವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ-ಮಗ ಪ್ರಾಣಾಪಾಯದಿಂದ ಪಾರಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಕೊಲೆ ನಡೆಯುತ್ತಿದ್ದಂತೆ ಆರೋಪಿ ಚುನು ಸೊರೆನ್​ ತನ್ನ ಇಬ್ಬರು ಮಕ್ಕಳ ಕರೆದುಕೊಂಡು ದೂರ ಹೋಗಿದ್ದ. ಆರೋಪಿಯನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.

ABOUT THE AUTHOR

...view details