ಕರ್ನಾಟಕ

karnataka

ETV Bharat / briefs

ಮೇಲ್ಕಾರ್ ಹತ್ಯೆ ಪ್ರಕರಣ: ಗುಂಡು ಹಾರಿಸಿ ಆರೋಪಿ ಬಂಧಿಸಿದ ಪೊಲೀಸರು - ಬಂಟ್ವಾಳ

ಬಂಟ್ವಾಳ ತಾಲೂಕಿನ ಮೇಲ್ಕಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಹಿಡಿಯುವ ಯತ್ನದಲ್ಲಿದ್ದಾಗ ಪೊಲೀಸರ ಮೇಲೆ ಆರೋಪಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಈ ವೇಳೆ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಿದ್ದಾರೆ.

Mailkar murder case
ಮೇಲ್ಕಾರ್ ಹತ್ಯೆ ಪ್ರಕರಣ: ಆರೋಪಿಯನ್ನು ಹಿಡಿಯಲು ಪೊಲೀಸರ ಫೈರಿಂಗ್

By

Published : Oct 24, 2020, 9:50 AM IST

Updated : Oct 24, 2020, 11:04 AM IST

ಬಂಟ್ವಾಳ: ಮೇಲ್ಕಾರ್ ಬಳಿಯ ಗುಡ್ಡೆ ಅಂಗಡಿಯಲ್ಲಿ ಯುವಕನನ್ನು ಮಾರಕಾಯುಧದಿಂದ ಇರಿದು ಕೊಲೆ ಮಾಡಿದ ಆರೋಪಿಯೊಬ್ಬನಿಗೆ ಬಂಟ್ವಾಳ ಪೊಲೀಸರು ಫೈರಿಂಗ್ ಮಾಡಿ ಬಂಧಿಸಿದ್ದಾರೆ. ಈ ಘಟನೆ ಶನಿವಾರ ಮುಂಜಾನೆ ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಮತ್ತು ಗುಂಡ್ಯ ಮಧ್ಯೆ ನಡೆದಿದೆ.

ಶುಕ್ರವಾರ ಸಂಜೆ ಮೇಲ್ಕಾರಿನಲ್ಲಿ ಉಮರ್ ಫಾರೂಕ್ ಎಂಬಾತನ ಭೀಕರ ಹತ್ಯೆಯಾಗಿತ್ತು. ಈ ಸಂಬಂಧ ನಂದಾವರ ನಿವಾಸಿ ಖಲೀಲ್ ಎಂಬಾವನನ್ನು ಬಂಧಿಸಲು ಖಚಿತ ಮಾಹಿತಿ ಮೇರೆಗೆ ಪೊಲೀಸರು ತೆರಳಿದ್ದರು. ನೆಲ್ಯಾಡಿ, ಗುಂಡ್ಯ ಮಧ್ಯೆ ಆರೋಪಿಗಳು ಕಂಡು ಬಂದಿದ್ದು, ಅವರನ್ನು ಹಿಡಿಯಲು ಹೋದಾಗ ಪೊಲೀಸರ ಮೇಲೆ ದಾಳಿ ಮಾಡಲಾಗಿದೆ.

ಈ ವೇಳೆ ಗುಂಡು ಹಾರಿಸಿದ ಸಂದರ್ಭ ಆರೋಪಿಗೆ ಗಾಯಗಳಾಗಿವೆ. ಇದೇ ವೇಳೆ ಎಸ್​ಐ ಪ್ರಸನ್ನ ಅವರು ಗಾಯಗೊಂಡಿದ್ದಾರೆ.

Last Updated : Oct 24, 2020, 11:04 AM IST

ABOUT THE AUTHOR

...view details