ಕರ್ನಾಟಕ

karnataka

ETV Bharat / briefs

ವಿಶ್ವಕ್ಕೇ ಆಯಿತು ಬ್ರಿಟನ್​ 'ಆದ್ಯವೀರ'ನ ದರ್ಶನ...! ಹೀಗಿದ್ದಾನೆ ರಾಜಕುವರ - Prince Harry

ಇಡೀ ಬ್ರಿಟನ್ ಗೆ ಹೊಸ ರಾಜಕುವರನ ದರ್ಶನವಾಗಿದೆ.  ಅವನನ್ನು ರಾಜಕುಮಾರ ಹ್ಯಾರಿ ಹಾಗೂ ಆತನ ಪತ್ನಿ ಮೇಘನಾ ಮಾರ್ಕೆಲ್ ತಮ್ಮ ಮಗುವನ್ನ ಸಾರ್ವಜನಿಕವಾಗಿ ತೋರಿಸುವ ಮೂಲಕ ಇಂಗ್ಲೆಂಡಿಗರ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ರಾಜಕುವರ

By

Published : May 8, 2019, 6:17 PM IST

ಲಂಡನ್​: ಬ್ರಿಟನ್​ ರಾಜಮನೆತನಕ್ಕೆ ಒಬ್ಬ ಅತಿಥಿ ಆಗಮಿಸಿದ್ದಾನೆ ಎಂಬುದು ಕಳೆದೆರಡು ದಿನಗಳಿಂದ ಸದ್ದಿನ ಜತೆಗೆ ಸುದ್ದಿಯೂ ಆಗುತ್ತಿದೆ. ಇಂಥ ರಾಜಮನೆತನಕ್ಕೆ ಆಗಮಿಸಿರುವಾ ಆ ಅತಿಥಿ ನೋಡಲು ಇಡೀ ಇಂಗ್ಲೆಂಡ್​ ಕಾತರದಿಂದ ಕಾಯುತ್ತಿತ್ತು.

ಈ ಕಾಯುವಿಕೆಗೆ ಇವತ್ತು ತೆರೆ ಬಿದ್ದಿದೆ.ಈತನನ್ನು ಸ್ವಾಗತಿಸಲು ಕಾಯುತ್ತಿದ್ದ ಇಡೀ ಬ್ರಿಟನ್ ಗೆ ಹೊಸ ರಾಜಕುವರನ ದರ್ಶನವಾಗಿದೆ. ಅವನನ್ನು ರಾಜಕುಮಾರ ಹ್ಯಾರಿ ಹಾಗೂ ಆತನ ಪತ್ನಿ ಮೇಘನಾ ಮಾರ್ಕೆಲ್ ತಮ್ಮ ಮಗುವನ್ನ ಸಾರ್ವಜನಿಕವಾಗಿ ತೋರಿಸುವ ಮೂಲಕ ಇಂಗ್ಲೆಂಡಿಗರ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ಇಂಗ್ಲೆಂಡ್​ನ ಆದ್ಯವೀರನನ್ನು ತೋರಿಸಿ, ಹೀಗಿದ್ದಾನೆ ನೋಡಿ ಎಂದಿದ್ದಾರೆ. ವಿಂಡ್ಸರ್​ ಕ್ಯಾಸ್ಟಲ್​ನಲ್ಲಿ ಕಳೆದೆರಡು ದಿನಗಳ ಹಿಂದೆ ಜನಿಸಿದ್ದ ಗಂಡು ಮಗುವನ್ನ ವಿಶ್ವಕ್ಕೆ ದರ್ಶನ ಮಾಡಿಸಿದ್ದಾರೆ.

ಸೋಮವಾರ ಗಂಡು ಮಗು ಜನಿಸಿದ ವಿಷಯ ಗೊತ್ತಾಗುತ್ತಿದ್ದಂತೆ. ಇಡೀ ಬ್ರಿಟನ್​ ಸಂಭ್ರಮದಲ್ಲಿ ಮುಳುಗಿತ್ತು.. ಯುವರಾಜನಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದರು. ಆಸ್ತಾನ ಕಲಾವಿದರು, ರತ್ನ ಗಂಬಳಿ ಹಾಸುವವರು ಸೇರಿದಂತೆ ಅರಮನೆ ಸಿಬ್ಬಂದಿ ಶಾಂಪೇನ್​ ಬಾಟಲಿ ಓಪನ್​ ಮಾಡುವ ಮೂಲಕ ತಮ್ಮ ಖುಷಿ ವ್ಯಕ್ತಪಡಿಸಿದ್ದರು. ಮೊನ್ನೆ ಬಕಿಂಗ್​ ಹ್ಯಾಂ ಅರಮನೆಗೆ ಆಗಮಿಸಿದ ಪ್ರಸೂತಿ ತಂಡವು ಯಶಸ್ವಿಯಾಗಿ ಹೆರಿಗೆ ನೆರವೇರಿಸಿ, ಗಂಡು ಮಗುವಿಗೆ ಜನ್ಮ ನೀಡಿದ ವಿಷಯವನ್ನು ಅಧಿಕೃತವಾಗಿ ತಿಳಿಸಿದ್ದರು.

ABOUT THE AUTHOR

...view details