ಪ್ಯಾರಿಸ್(ಫ್ರಾನ್ಸ್): ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆಕೆ ಇಂದು ಕ್ರಿಕೆಟರ್ ಆಗಿ ರಾಷ್ಟ್ರೀಯ ತಂಡದಲ್ಲಿ ಮಿಂಚಬೇಕಿತ್ತು. ಆದರೆ ಇದೀಗ ಫ್ರೆಂಚ್ ಓಪನ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾಳೆ.
ಹೌದು, ಫ್ರೆಂಚ್ ಓಪನ್ ಮಹಿಳೆಯ ವಿಭಾಗದಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದ ಆಶ್ಲೀ ಬಾರ್ಟಿ ಮೂಲತಃ ಓರ್ವ ಕ್ರಿಕೆಟರ್. 1973ರ ಬಳಿಕ ಫ್ರೆಂಚ್ ಓಪನ್ ಗೆದ್ದಆಸೀಸ್ನ ಟೆನಿಸ್ ಆಟಗಾರ್ತಿಯಾಗಿರುವ ಈಕೆ ಕೆಲ ವರ್ಷಗಳ ಹಿಂದೆ ಮಹಿಳಾ ಕ್ರಿಕೆಟ್ ಲೀಗ್ನಲ್ಲಿ ಮಿಂಚು ಹರಿಸಿದ್ದಳು. ಉಪಾಂತ್ಯದಲ್ಲಿ ಮಾರ್ಕೆಟಾ ವುಂಡ್ರೋಸುವಾರನ್ನು 6-1, 6-3 ಸೆಟ್ಗಳಿಂದ ಮಣಿಸಿ ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಗೆದ್ದಿದ್ದಾಳೆ.
2011ರಲ್ಲಿ ವಿಂಬಲ್ಡನ್ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಆಶ್ಲೀ ಕೊಂಚ ಬ್ರೇಕ್ ಅಗತ್ಯವಿದೆ ಎಂದು ಕಾರಣ ನೀಡಿ ಸ್ಪರ್ಧಾತ್ಮಕ ಟೆನಿಸ್ನಿಂದ ದೂರ ಸರಿದಿದ್ದಳು. ಇದೇ ಸಮಯದಲ್ಲಿ ಆಕೆ ಕ್ರಿಕೆಟ್ ಟ್ರೈ ಮಾಡೋಣ ಎಂದು ಮೈದಾನಕ್ಕಿಳಿದಿದ್ದಳು.