ಜೆರುಸಲೆಂ(ಇಸ್ರೇಲ್) :ನಿನ್ನೆ ತಡರಾತ್ರಿ ಪ್ಯಾಲೆಸ್ಟೀನಿಗಳು ಹಾಗೂ ಇಸ್ರೇಲಿ ಪೊಲೀಸರ ನಡುವೆ ನಡೆದ ಭಾರೀ ಘರ್ಷಣೆಯಲ್ಲಿ 200ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯರು ಗಾಯಗೊಂಡಿದ್ದಾರೆ.
ಜೆರುಸಲೆಂನಲ್ಲಿ ಪೊಲೀಸ್-ಪ್ಯಾಲೆಸ್ಟೀನಿಗಳ ನಡುವೆ ಭೀಕರ ಘರ್ಷಣೆ.. 200ಕ್ಕೂ ಅಧಿಕ ಮಂದಿಗೆ ಗಾಯ - ಜೆರುಸಲೆಂ ಘರ್ಷಣೆಯಲ್ಲಿ 200 ಕ್ಕೂ ಅಧಿಕ ಮಂದಿಗೆ ಗಾಯ
ಪವಿತ್ರ ರಂಜಾನ್ ತಿಂಗಳ ಆರಂಭದಲ್ಲಿಯೇ ಜನಪ್ರಿಯ ಕೂಟವೊಂದು ಪೊಲೀಸ್ ನಿರ್ಬಂಧದ ನಡುವೆಯೂ ನಡೆದಿದ್ದವು..
ಜೆರುಸಲೆಂನಲ್ಲಿ ಪೊಲೀಸ್-ಪ್ಯಾಲೆಸ್ಟೀನಿಗಳ ನಡುವೆ ಭೀಕರ ಘರ್ಷಣೆ
ಅಲ್-ಅಕ್ಸಾ ಮಸೀದಿ ಹಾಗೂ ಜೆರುಸಲೆಮ್ನ ಇತರೆಡೆಗಳಲ್ಲಿ ನಿನ್ನೆ ರಾತ್ರಿ ಭಾರೀ ಘರ್ಷಣೆ ನಡೆದಿದೆ. ಹೆಚ್ಚಿನ ಜನರು ಒಟ್ಟುಗೂಡುವುದನ್ನು ತಡೆಯಲು ಈ ಹಿಂದೆಯೇ ಪೊಲೀಸರಿಂದ ನಿರ್ಬಂಧ ಹೇರಲಾಗಿತ್ತು.
ಪವಿತ್ರ ರಂಜಾನ್ ತಿಂಗಳ ಆರಂಭದಲ್ಲಿಯೇ ಜನಪ್ರಿಯ ಕೂಟವೊಂದು ಪೊಲೀಸ್ ನಿರ್ಬಂಧದ ನಡುವೆಯೂ ನಡೆದಿದ್ದವು. ನಿನ್ನೆಯೂ ಅಷ್ಟೇ, ಸಾವಿರಾರು ಮುಸ್ಲಿಂ ಆರಾಧಕರು ಎಸ್ಪ್ಲನೇಡ್ನಲ್ಲಿ ರಂಜಾನ್ ಪ್ರಾರ್ಥನೆಗಳನ್ನು ನಡೆಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿ, ಹಿಂಸಾಚಾರ ನಡೆದಿದೆ.