ಪಾಟ್ನಾ:ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಕಾರಿನ ಮೇಲೆ ದಾಳಿ ನಡೆದಿದ್ದು,ಕಾರಿನ ಗಾಜು ಒಡೆದು ಹೋಗಿದೆ.
ತೇಜ್ ಪ್ರತಾಪ್ ಕಾರಿನ ಮೇಲೆ ದಾಳಿ,ಸಿಬ್ಬಂದಿಯಿಂದ ವರದಿಗಾರನ ಮೇಲೆ ಹಲ್ಲೆ! - ಕಾರಿನ ಮೇಲೆ ದಾಳಿ
ತೇಜ್ ಪ್ರತಾಪ್ ಮತದಾನ ಮಾಡಲು ಆಗಮಿಸುತ್ತಿದ್ದ ವೇಳೆ ಘಟನೆ ನಡೆದಿದ್ದು,ವರದಿಗಾರನ ಮೇಲೆ ಹಲ್ಲೆ ನಡೆಸಲಾಗಿದೆ.
![ತೇಜ್ ಪ್ರತಾಪ್ ಕಾರಿನ ಮೇಲೆ ದಾಳಿ,ಸಿಬ್ಬಂದಿಯಿಂದ ವರದಿಗಾರನ ಮೇಲೆ ಹಲ್ಲೆ!](https://etvbharatimages.akamaized.net/etvbharat/prod-images/768-512-3325276-thumbnail-3x2-wdfw.jpg)
ತೇಜ್ ಪ್ರತಾಪ್ ಕಾರಿನ ಮೇಲೆ ದಾಳಿ
ತೇಜ್ ಪ್ರತಾಪ್ ಕಾರಿನ ಮೇಲೆ ದಾಳಿ
ತೇಜ್‌ಪ್ರತಾಪ್ ವಿರುದ್ಧ ಆಕ್ರೋಶಗೊಂಡ ಕೆಲ ಸ್ಥಳೀಯರು ಅವರ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಇದೇ ವೇಳೆ ಕೆಲ ವರದಿಗಾರರು ತೇಜ್ ಪ್ರತಾಪ್ ಬಳಿ ಪ್ರಶ್ನೆ ಕೇಳಲು ಮುಂದಾದರು. ಆಗ ತೇಜ್ ಪ್ರತಾಪರ ಸಿಬ್ಬಂದಿ ವರದಿಗಾರನೋರ್ವನ ಮೇಲೆ ಹಲ್ಲೆ ಮಾಡಿದ್ದಾನೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ತೇಜ್ ಪ್ರತಾಪ್, ನನ್ನ ಸಹಚರರು ಯಾವುದೇ ತಪ್ಪು ಮಾಡಿಲ್ಲ. ವೋಟ್ ಮಾಡಿ ತೆರಳುತ್ತಿದ್ದ ವೇಳೆ ವರದಿಗಾರನೋರ್ವ ನನ್ನ ಕಾರಿನ ಗಾಜು ಒಡೆದು ಹಾಕಿದ್ದಾನೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ನಾನು ದೂರು ದಾಖಲು ಮಾಡಿದ್ದು, ನನ್ನ ಕೊಲೆ ಮಾಡಲು ಈ ಸಂಚು ನಡೆದಿದೆ ಎಂದರು.